ಬೆಂಗಳೂರು: ಸರ್ವೆ ಮಾಡುವ ವೇಳೆ ನಿಮ್ಮ ಮನೆಯಲಿ ಎಷ್ಟು ಚಿನ್ನವಿದೆ, ಎಷ್ಟು ವಾಚ್‌ ಇದೆ ಎಷ್ಟು ಕುರಿ-ಕೋಳಿ ಇದೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಬೇಡಿ, ಅದು ಅವರ ಪರ್ಸನಲ್‌ ವಿಚಾರ ಎಂದು ಅಧಿಕಾರಿಗಳಿಗೆ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಯಾವ ಪ್ರಶ್ನೆಗೆ ಉತ್ತರ ಬೇಕೊ ಕೇಳಿ ಪಡೆದುಕೊಳ್ಳಿ ಆದರೆ ತೀರಾ ಪರ್ಸನಲ್‌ ವಿಷಯಗಳು ಬೇಡವೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆಂದು ಹೇಳಿದ್ದಾರೆ.

ಕೋರ್ಟ್‌ ಏನು ಹೇಳಿದೆಯೋ ಯಾವ ಪ್ರಶ್ನೆಗೆ ಉತ್ತರ ಬೇಕೋ ಅದಕ್ಕೆ ಉತ್ತರ ನೀಡಿ, ಅದು ಬಿಟ್ಟು ಸಮೀಕ್ಷೆಯನ್ನು ವಿರೋಧಿಸುವುದು ಬೇಡ. ಇಲಾಖೆಯವರು ಏನು ಮಾಡ್ತಾರೆ ಮಾಡಲಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಮನವಿಯನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *