ಮೈಸೂರು: ಮುಂಬರುವ ತಿಂಗಳಿನಲ್ಲಿ ಅಂದರೆ ನವೆಂಬರ್ ತಿಂಗಳಿನಲ್ಲಿ ರಾಜಕೀಯ ವಲಯದಲ್ಲಿ ಬಹು ದೊಡ್ಡ ಬದಲಾವಣೆಯಾಗಲಿದೆ ಎಂದು ಬಿ.ವೈ.ವಿಜಯೇಂದ್ರ ಭವಿಷ್ಯವನ್ನು ನುಡಿದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಖಡಾಖಂಡಿತವಾಗಿ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿಕೆಶಿವಕುಮಾರ್ ಕಡೆ ಇದ್ದರೆ, ಡಿಕೆ ಶಿವಕುಮಾರ್ ನಡೆ ಸಿಎಂ ಸಿದ್ದರಾಮಯ್ಯನವರ ಕಡೆಯಿದೆ, ಆದರೆ, ಶಾಸಕರ ನಡೆ ಬೇರೆ ಬೇರೆ ಕಡೆಯಿದೆ ಆದ್ದರಿಂದ ಅಲ್ಲೋಲಕಲ್ಲೋವಾಗಲಿದೆ ಎಂದು ಗ್ಯಾರಂಟಿಯಾಗಿ ಹೇಳಿದ್ದಾರೆ.
ರಾಜಕೀಯದಲ್ಲಿ ಅಲ್ಲೋಲಕಲ್ಲೋಲವಾದರೆ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ ಬಿ.ವೈ.ವಿಜಯೇಂದ್ರ.
