ನಟನೆಯಲ್ಲೂ ಸೈ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿರುವ ರಿಷಬ್‌ ಶೆಟ್ಟಿಯವರ ಕಾಂತಾರ -1 ಚಿತ್ರವೂ ಅದ್ದೂರಿಯಾಗಿ ಪ್ರದರ್ಶನವನ್ನು ಕಾಣುತ್ತಿದ್ದು, ಸಿನಿಮಾವನ್ನು ನೋಡಿವ ಪ್ರೇಕ್ಷಕರ ರಿಯಾಕ್ಷನ್‌ ಮತ್ತು ಅಭಿಮಾನಿಗಳಿಂದ ವ್ಯಕ್ತವಾಗಿರುವ ಮೆಚ್ಚುಗೆಯನ್ನು ಕಂಡು ರಿಷಬ್‌ ಶೆಟ್ಟಿಯವರ ಪತ್ನಿ ಭಾವುಕರಾಗಿ ತನ್ನ ಪತಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ತಮ್ಮ ಪತ್ನಿ ಭಾವುಕರಾಗಿ ಕಕಣ್ಣೀರಿಡುವುದನ್ನು ಕಂಡು ರಿಷಬ್‌ ಶೆಟ್ಟಿ ಸಮಾಧಾನ ಮಾಡಿದ್ದಾರೆ.

ದಸರಾ-ವಿಜಯದಶಮಿಯ  ದಿನದಂದು ಬಿಡುಗಡೆಯಾಗಿರುವ ಚಿತ್ರವೂ ಹಬ್ಬದ ಸಂಭ್ರಮವನ್ನೂ ಮತ್ತಷ್ಟು ಹಿಮ್ಮಡಿಗೊಳಿಸಿದೆ ಎಂದರೆ ತಪ್ಪಾಗಲಾರದು.

ಹಬ್ಬದ ಸಮಯದಲ್ಲಿ ಕಾಂತಾರ-1 ರಿಲೀಸ್‌ ಆಗಿದ್ದು, ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ ರಿಷಬ್‌ ಶೆಟ್ಟಿಯವರ ಸಿನಿಮಾ, ಈ ಶೆಟ್ಟರು ಯಾವುದಾದರೂ ಹೊಸದೊಂದನ್ನು ಚಿತ್ರದಲ್ಲಿ ತೋರಿಸುತ್ತಾರೆ ಎಂಬ ಪ್ರೇಕ್ಷಕರ ನಂಬಿಕೆ ಸುಳ್ಳಾಗಲಿಲ್ಲ. ಚಿತ್ರವನ್ನು ಕಣ್ತುಂಬಿಕೊಂಡವರು ಚಿತ್ರದ ಬಗ್ಗೆ ಬಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *