ಆರ್‌ಸಿಬಿ ತಂಡದಿಂದ ಪಂಜಾಬ್‌ಕಿಂಗ್ಸ್‌ ತಂಡಕ್ಕೆಹೋದ  ಕ್ರಿಸ್‌ ಗೇಲ್‌ ತಾನು ಆಟವಾಡಿದ ತಂಡದ ಬಗ್ಗೆ ಅಸಧಾನವನ್ನು ಹೊರಹಾಕಿದ್ದಾರೆ. ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನೋವನ್ನು ತಡೆದುಕೊಳ್ಳಲಾರದೆ ಅನಿಲ್‌ ಕುಂಬ್ಳೆಯವರ ಮುಂದೆ ಕಣ್ಣೀರು ಹಾಕಿದ್ದೆ ಎಂದು ಹೇಳಿದ್ದಾರೆ.

ಒಬ್ಬ ಹಿರಿಯ ಆಟಗಾರನಿಗೆ ಸಿಗಬೇಕಾದ ಪಾಮುಖ್ಯತೆ ನನಗೆ ಸಿಗಲಿಲ್ಲ.ಈ ಘಟನೆಯಿಂದ ನನಗೆ ತುಂಬಾ ನೋವುಂಟಾಗಿ ಡಿಪ್ರೆಷನ್ನಿಗೆ ಹೋಗುವ ಹಾಗಾಯಿತು. ಒಮ್ಮೆ ಅನಿಲ್‌ ಕುಂಬ್ಳೆ ಜೊತೆ ಮಾತನಾಡುವಾಗ ಅತ್ತುಬಿಟ್ಟೆ ಎಂದು ತಮಗಾದ ನೋವನ್ನು ಹಂಚಿಕೊಂಡಿದ್ದಾರೆ.

2018ರಿಂದ 2021ರವರೆಗೆ ಪಂಜಾಬ್‌ಕಿಂಗ್ಸ್‌ ತಂಡದ ಪರವಾಗಿ ಆಟವಾಡಿದರೂ ಮ್ಯಾನೆಜ್‌ಮೆಂಟ್‌ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದು ಹೇಳಿದ್ದಾರೆ. ಪಂಜಾಬ್‌ ಕಿಂಗ್ಸ್‌ ಪರವಾಗಿ ಆಡುವಾಗ ಅನಿಲ್‌ಕುಂಬ್ಳೆಯವರು ಮೆಂಟರ್‌ ಆಗಿದ್ದರು, ಕೆಎಲ್‌ ರಾಹುಲ್‌ ನಾಯಕರಾಗಿದ್ದರು ಎಂಬುದು ಗಮನಿಸಬೇಕಾದ ವಿಷಯವಾಗಿದೆ.ಕ್ರಿಸ್‌ ಗೇಲ್‌ ವಿಂಡೀಸ್‌ ತಂಡದಲ್ಲಿ ಮತ್ತೆ ಆಟವಾಡಿಸಬೇಕೆಂದು ಬ್ರಿಯಾನ್‌ ಲಾರಾ ಹೇಳಿದ್ದಾರೆ.

xr:d:DAE_K1DU_yY:774,j:29564625404,t:22062717

ಶುಭಂಕರ್‌ ಮಿಶ್ರಾ ರವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕ್ರಿಸ್‌ ಗೇಲ್‌ರವರು, ಒಬ್ಬ ಹಿರಿಯ ಆಟಗಾರನಿಗೆ ಸಿಗಬೇಕಾಗ ಪ್ರಾಮುಖ್ಯತೆ ನನಗೆ ಸಿಗಲಿಲ್ಲ. ಈ ನೋವಿನಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ನನ್ನ IPL ಜೀವನ ಬೇಗ ಮುಗಿಯಿತು. ನಾನು ಕ್ರಿಕೆಟ್‌ ಲೀಗ್‌ಗೆ ತುಂಬಾ ಕೊಡುಗೆ ನೀಡಿದ್ದೇನೆ.ನನಗೆ ಸಿಗಬೇಕಾದ ಬೆಲೆ ಸಿಗಲಿಲ್ಲ. ತೀರಾ ಚಿಕ್ಕ ಮಕ್ಕಳಮತೆ ನನ್ನನ್ನು ಟ್ರೀಟ್‌ ಮಾಡಿದರು. ಪ್ರಾಂಚೈಸ್‌ ನನ್ನನ್ನು ನಡೆಸಿಕೊಂಡ ರೀತಿಯಿಂದ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *