ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಇವಿಎಂ ಮೆಷಿನ್‌ಗಳ ಮೇಲೆ ನಂಬಿಕೆಯಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಇವಿಎಂ ಮೆಷಿನ್‌ ಸರಿಯಿಲ್ಲ ಎಂದು ಹೇಳಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಸವಾಲನ್ನು ಎಸೆದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಹಲವಾರು ಅಕ್ರಮಗಳು, ಗೊಂದಗಳು ಹೆಚ್ಚಾಗುತ್ತಿದ್ದವು.ಆದ್ದರಿಂದ ಅದರ ಪರ್ಯಾಯವಾಗಿ ಇವಿಎಂ ಮೆಷಿನ್‌ ಬಂತು. 2004,2009ರಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್ಸಿನವರಿಗೆ  ಯಾವುದೇ ರೀತಿಯ ತಕರಾರುಗಳಿರಲಿಲ್ಲ ಆದರೀಗ ಎಲ್ಲಾ ಉದ್ಬವವಾಗಿವೆ ಎಂದು  ಹೇಳಿದ್ದಾರೆ.

ಸಿದ್ದರಾಮಯ್ಯ  ಗೆದ್ದಿದ್ದು ಇವಿಎಂನಿಂದ ಇವರು ಸಿಎಂ ಆಗಲು ಇವಿಎಂ ಬೇಕು .ಇವಿಎಂ ಮೆಷಿನ್‌ನಲ್ಲಿ ಏನಾದ್ರೂ ದೋಷಗಳಿದ್ದರೆ ತೋರಿಸಿ ಎಂದರೆ ಯಾರು ದಾಖಲೆ ಸಮೇತ ಪ್ರೂ ಮಾಡಲು ಮುಂದೆ ಬರಲಿಲ್ಲ.ಅವರ ಅನುಭವದ ಮೇರೆಗೆ ಇವಿಎಂ ಮೆಷಿನ್‌ ಬದಲಾಗಿ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇವಿಎಂ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ನೀಡಿ ಆರೋಪ ಮಾಡಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *