ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಮಾಂಸಾಹಾರವನ್ನು ಸೇವಿಸದೇ ಧರ್ಮಸ್ಥಳಕ್ಕೆ ಹೋಗಲಿ ಎಂದು ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಧರ್ಮಸ್ಥಳ ಚಲೋ ಮಾಡಲು ಮುಂದಾಗಿರುವುದಕ್ಕೆ ನನ್ನ ಸ್ವಾಗತ. ಆದ್ರೆ ಮುಖ್ಯಮಂತ್ರಿಗಳು ಮಾಂಸದ ಖಾದ್ಯಗಳನ್ನು ಸೇವನೇ ಮಾಡದೇ ಧರ್ಮಸ್ಥಳಕ್ಕೆ ಹೋಗಲಿ ಹಾಗೆಯೇ ಡಿಸಿಎಂ ಡಿಕೆ ಶಿವಕುಮಾರ್ರವರು ಹೋಗಲಿ ಎಂದು ಹೇಳಿದ್ದಾರೆ.
ಅದೇ ವೇಳೆಯಲ್ಲಿ ದಸರಾ ಉದ್ಘಾಟನಗೆ ಬಾನು ಮುಷ್ತಾಕ್ರನ್ನು ಆಯ್ಕೆ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಆ ಹೆಣ್ಣುಮಗಳಿಗೆ ಮಾನ-ಮರ್ಯಾದೆ ಬೇಕು. ಮೈಸೂರು ನಗರಿಯಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮಸ ಸಂಸ್ಕಾರ.ಅಲ್ಲಿ ಮುಸ್ಲೀಂ ಧರ್ಮದ ಬಾನು ಮುಷ್ತಾಕ್ಗೆ ಏನು ಕೆಲಸ? ಅವರೇನು ಹಿಂದುನಾ? ಅವರೇನು ಮಾಜಿ ಮುಸ್ಲೀಮರಾ? ಮಾತೆ ಚಾಮುಂಡೇಶ್ವರಿ ಶಾಪ ತಗುಲಬಾರದೆಂದರೆ ಅವರೇ ಬಿಟ್ಟು ಬಿಡಬೇಕು ಎಂದಿದ್ದಾರೆ.
