ಬೆಂಗಳೂರು: ಲಾಲ್ಬಾಗ್ ಬಳಿಯಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆಗಳಾಗಿದ್ದು, ರ್ಯಾಗಿಂಗ್ ವಿಚಾರಕ್ಕೆ ಲಾಂಗು ಮಚ್ಚುಗಳಂತಹ ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ನಗರದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆಗಳು ನಡೆದಿದೆ, ಅದರಲ್ಲಿ ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಲಾಗಿದೆ.ಈ ಘಟನೆಯು ಸೆಪ್ಟೆಂಬರ್ 2ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.
