ಭಾಗಲ್‌ಪುರ: ಮತಗಳ್ಳತನದ ಬಗ್ಗೆ ಪ್ರಧಾನಿ ಮೋದಿ ಯಾಕೆ ಮಾತಾನಾಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ಪ್ರಶ್ನೆ ಮಾಡಿದ್ದಾರೆ.

ಬಿಹಾರದ ಎಸ್‌ ಆರ್ ವಿರುದ್ದ ಕಾಂಗ್ರೆಸ್‌ ನಾಯಕ ಆರಂಭಿಸಿದ ʼವೋಟರ್‌ ಅಧಿಕಾರ್‌ ಯಾತ್ರೆʼಯು ಇಂದು(ಶುಕ್ರವಾರ) ಭಾಗಲ್‌ಪುರ ತಲುಪಿದ್ದು, ಸಂದರ್ಭದಲ್ಲಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ  ಮಾತನಾಡಿದ್ದಾರೆ.

ನಿಮ್ಮೆಲ್ಲರ ಮತಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಬಿಜೆಪಿ ಮತ್ತು ಚುನಾವಣಾ ಆಯೋಗ  ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ನಡೆಸಲಿದ್ದಾರೆ. ನಿಮ್ಮೆಲ್ಲರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಜನತೆಯನ್ನು ಎಚ್ಚರಿಸುತ್ತಿದ್ದಾರೆ.

ಇಂದು ಬೆಳಗ್ಗೆ ಗಯಾಜಿಗೆ ಭೇಟಿ ನೀಡಿದ ಪ್ರಧಾನಿಯವರು ಮತಗಳ್ಳತನದ ಬಗ್ಗೆ ಮಾತನಾಡಲಿಲ್ಲ. ಒಂದರ ಮೇಲೆ ಮತ್ತೊಂದು ರಾಜ್ಯಗಳಲ್ಲಿ ಮತಗಳ್ಳತನ ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆಯೂ ಸುಮ್ಮನಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತಗಳ ಕಳ್ಳತನವು ಭಾರತ ದೇಶದ ಸಂವಿಧಾನದ ಮೇಲೆ ಮಾಡುವ ದಾಳಿಯಾಗಿದೆ ಎಂದಿರುವ ಅವರು, ಬಿಹಾರದ ಜನರ ಮತದಾನದ ಹಕ್ಕನ್ನು ರಕ್ಷಿಸಲು ನಮ್ಮ ಇಂಡಿಯಾ ಒಕ್ಕೂಟವು ಹೋರಾಟ ಮಾಡುತ್ತದೆ ಎನ್ನುವ ಭರವಸೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *