ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದ ದೂರುದಾರ ಮಾಸ್ಕ್‌ಮ್ಯಾನ್‌ನನ್ನು 10 ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ನೀಡಬೇಕೆಂದು ಬೆಳ್ತಂಗಡಿ ನ್ಯಾಯಾಲಯವೂ ಆದೇಶವನ್ನು ನೀಡಿದೆ.
ಎಸ್ ಐ ಟಿ ಪೊಲೀಸರು ಮಾಸ್ಕ್‌ಮ್ಯಾನ್‌ನನ್ನು ಸುದೀರ್ಘ ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಿದ ನಂತರ ಮತ್ತೆ ವಶಕ್ಕೆ ನೀಡಬೇಕೆಂದು ನ್ಯಾಯಾಲಯದ ಮುಂದೆ ಕೇಳಿಕೊಂಡಿದ್ದಾರೆ. ಪೊಲೀಸರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ ಮಾಸ್ಕ್‌ಮ್ಯಾನ್‌ನನ್ನು10ದಿನಗಳ ಕಾಲ ಎಸ್ ಐ ಟಿ ವಶಕ್ಕೆ ನೀಡುವಂತೆ ಆದೇಶವನ್ನು ಹೊರಡಿಸಿದೆ.
