ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕೊಲೆಯ ಆರೋಪ ಮಾಡಿರುವ ಮಹೇಶ್ ತಿಮರೋಡಿ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, ಮಹೇಶ್ ತಿಮರೋಡಿ ಬಿಜೆಪಿ ಕಾರ್ಯಕರ್ತ. ಆತ ಮೊದಲು ತಮ್ಮ ನಾಯಕರ ವಿರುದ್ಧವೇ ಹೇಳಿಕೆಯನ್ನು ನೀಡಿದ್ದಾರೆ. ಆತ ನೀಡಿರುವ ಹೇಳಿಕೆಯನ್ನೊಮ್ಮೆ ಗಮನಿಸಿ ಆತ ಬಿಜೆಪಿಯ ನಾಯಕರ ವಿರುದ್ಧ ಆರೋಪಗಗಳ ಸುರಿಮಳೆಯನ್ನು ಸುರಿಸಿದ್ದಾನೆ.ತಮ್ಮ ಪಕ್ಷದ ಕಾರ್ಯಕರ್ತ ತಮ್ಮ ಪಕ್ಷದ ವಿರುದ್ಧವೇ ಆರೋಪ ಮಾಡಿರುವುದಕ್ಕೆ ಈಗ ಬಿಜೆಪಿಯ ನಾಯಕರು ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ತಿರುಗೇಟನ್ನು ನೀಡಿದ್ದಾರೆ.
ಆತ ಯಾರು? ಯಾವ ಪಕ್ಷದ ಕಾರ್ಯಕರ್ತ?ಸ್ವಪಕ್ಷದ ವಿರುದ್ದವೇ ಹೇಳಿಕೆಗಳನ್ನು ನೀಡುತ್ತಿದ್ದಾನೆ. ತಮ್ಮ ಆರೋಪಗಳನ್ನು ಬಿಜೆಪಿಯವರು ನಮ್ಮ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದಿದ್ದಾರೆ.
