ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಕೊಲೆಗಳ ಆರೋಪ ಮಾಡಿರುವ ಮಹೇಶ್ ತಿಮರೋಡಿಯ ವಿರುದ್ದ ಪ್ರಕರಣವನ್ನು ದಾಖಲಿಸುವಂತೆ ಡಾ.ಜಿ.ಪರಮೇಶ್ವರ್ ಆಗ್ರಹ ಮಾಡಿದ್ದಾರೆ.
ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ತಿಮರೋಡಿ, ಸಿಎಂ ಸಿದ್ದರಾಮಯ್ಯನವರು 24 ಕೊಲೆಗಳನ್ನು ಮಾಡಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.ಈ ವಿಚಾರವಾಗಿ ಸದನದಲ್ಲಿಂದು ತಿಮ್ಮರೋಡಿಯ ಬಗ್ಗೆ ಚರ್ಚೆ ಮಾಡಿದ್ದು, ಅವರ ವಿರುದ್ದ ದೂರು ದಾಖಲು ಮಾಡಲು ಡಾ.ಜಿ.ಪರಮೇಶ್ವರ್ ಪೊಲೀಸರಿಗೆ ಆದೇಶವನ್ನು ನೀಡಿದ್ದಾರೆ.
