ಚಿಕ್ಕಮಗಳೂರು: ಬ್ರೆಡ್ಡ್‌ಗೆ ಜ್ಞಾನ ತಪ್ಪಿಸುವ ಮದ್ದನ್ನು ಮಿಕ್ಸ್‌ ಮಾಡಿ ತಿನ್ನಿಸಿ ದನಗಳನ್ನು ಕಳ್ಳತನ ಮಾಡಿರುವ ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಬಣಗಲ್‌ ಗ್ರಾಮದ ಆಸ್ಪತ್ರೆಯ ಮುಂಭಾಗದಲ್ಲಿ ಘಟನೆಯು ನಡೆದಿದ್ದುಸಿಸಿಟಿವಿ ಕ್ಯಾಮಾರಾದಲ್ಲಿ ಕಳ್ಳರ ಚಾಲಾಕಿತನ ಸೆರೆಯಾಗಿದೆ.ದನ-ಕರುಗಳಿಗೆ ಮತ್ತು ಬರುವ ಔಷಧಿಯನ್ನು ಮಿಕ್ಸ್‌ ಮಾಡಿ ತಿನ್ನಿಸಿದ್ದಾರೆ. ಆ ಬ್ರೆಡ್ಡನ್ನು ಸೇವಿಸಿದ ನಂತರ ದನಗಳು ಮಂಕಾಗುತ್ತಿದ್ದಂತೆ ಅವಗಳನ್ನು ವಾಹನಕ್ಕೆ ತುಂಬಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಬಣಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ  ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *