ವಿಜಯಪುರ:” ಮುಸಲ್ಮಾನ ಯುವತಿಯರನ್ನು ಹಿಂದೂ ಹುಡುಗರು ಮದುವೆಯಾದರೆ 5 ಲಕ್ಷ ಬಹುಮಾನ ನೀಡಲಾಗುತ್ತದೆ” ಎಂದು ಹಿಂದೂ ಯುವಕರಿಗೆ ಬಸವರಾಜ್‌ ಯತ್ನಾಳ್‌ ಕರೆನೀಡಿರುವ ಪರಿಣಾಮ ವಿಜಯಪುರದ ಮುಸ್ಲೀಂ ಮುಖಂಡ ಮತ್ತು ವಕೀಲ ಎಸ್‌ ಎಸ್‌ ಖಾದ್ರಿ “ಶಾಸಕ ಬಸವರಾಜ್‌ ಯತ್ನಾಳ್‌ ತನ್ನ ಹೆಂಡತಿಯನ್ನು ಮುಸ್ಲಿಂ ವ್ಯಕ್ತಿಯ ಜೊತೆ ಮದುವೆ ಮಾಡಿಸಲಿ “ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ತಮ್ಮ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯ ಜೊತೆ ಮದುವೆ ಮಾಡಿಸಲಿ ಕಾನೂನು ಬದ್ಧವಾಗಿ ತನ್ನ ಪತ್ನಿಯ ವಿವಾಹವನ್ನು ಮಾಡಿಸಿದಲ್ಲಿ, ಯಾವುದೇ ಎಲೆಕ್ಷನ್‌ನಲ್ಲಿ ಯತ್ನಾಳ್‌ ವಿರುದ್ದ ಮುಸಲ್ಮಾನರು ಸ್ಪರ್ಧಿಸುವುದಿಲ್ಲ ಎಂದು ವಿಜಯಪುರದ ಮುಸ್ಲಿಂ ಮುಖಂಡ ಎಸ್‌ ಎಸ್‌ ಖಾದ್ರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *