ನವದೆಹಲಿ: ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿದರೂ ಹತ್ಯೆಯ ವಿರುದ್ದ ದ್ವನಿಯೆತ್ತದ ಭಾರತ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅಸಮಧಾನ ಹೊರಹಾಕಿದ್ದಾರೆ.
ಎರಡು ವರ್ಷಗಳ ಯುದ್ದದಿಂದ ಗಾಝಾದಲ್ಲಿ 60.000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜನರ ಹಸಿವು ಅಪೌಷ್ಟಿಕತೆಯಿಂದ ಸಾಯುವ ಜನರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರಿಯಾಂಕ ಗಾಂಧಿಯವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.ಇಸ್ರೇಲ್ ದಾಳಿಯ ಪರಿಣಾಮ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಪೊಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
“ಇಸ್ರೇಲ್ ನರಮೇಧವನ್ನು ಮಾಡುತ್ತಿದೆ. ಇದರಿಂದ 60.000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ 18.430ಮಕ್ಕಳು ಸಾವನ್ನಪ್ಪಿದ್ದಾರೆ”.
