ಮೈಸೂರು : ಲೋಕಸಭೆ ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನ ಮಹದೇವಪುರದ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನದ ಕುರಿತು ನಿನ್ನೆ ರಾಹುಲ್ ಗಾಂಧಿ ದಾಖಲೆಯ ಸಮೇತ ಬಹಿರಂಗಗೊಳಿಸಿದ್ದರು. ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ,AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮುಂತಾದವರು ಆಗಮಿಸಲಿದ್ದಾರೆ.

ಮತಗಳ್ಳತನವನ್ನು ದಾಖಲೆ ಸಮೇತ ಬಹಿರಂಗಪಡಿಸಿದ ಬೆನ್ನಲ್ಲೇ ,ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಲ್ಲಿಯೂ ಕೂಡ, ನಕಲಿ ವೋಟರ್ ಐಡಿಗಳು ಪತ್ತೆಯಾಗಿವೆ ಎಂದು ಬಿಜೆಪಿಯು ಆರೋಪಿಸಿದೆ. ರಾಹುಲ್‌ ಗಾಂಧಿ ಬಹಿರಂಗಪಡಿಸಿದಂತೆ ಬಿಜೆಪಿಯಿಂದಲೂ ನಕಲಿ ವೋಟರ್ ಐಡಿ ಪತ್ತೆ ಮಾಡಿದೆ.

ಈ ಕುರಿತು ಇಂದು ಸಂಜೆ ಸುದ್ದಿಗೋಷ್ಟಿಯನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *