ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿರುವ ಲಾಯರ್‌ ಜಗದೀಶ್‌ ಅವ್ರು ಮೈಂಡ್‌ ಗೇಮ್‌ ಆಡುತ್ತಿದ್ದು, ಆಟದಲ್ಲಿ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂದು ಬಿಗ್‌ಬಾಸ್‌ ಸ್ಪರ್ಧಿಗಳ ನಡುವೆ ಚರ್ಚೆಗಳು ನಡೆಯುತ್ತಿವೆ.

ಜಗದೀಶ್‌ರವರು ಆಟವಾಡಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬ ಭಾವನೆ ಈಗಾಗಲೇ ಬಿಗ್‌ಬಾಸ್‌ ಮನೆಯವರಲ್ಲಿ ಮೂಡಿದೆ.ಆಟಕ್ಕಾಗಿ ತಂತ್ರ ಕುತಂತ್ರಗಳನ್ನು ಮಾಡುತ್ತಾ .ಅವರವರಲ್ಲಿಯೇ ಜಗಳಗಳನ್ನು ತಂದಿಡುತ್ತಿದ್ದು , ಅವರಿಗೆ ಬೇಕಾದ ಬಣ್ಣವನ್ನು ಬದಲಿಸಿಕೊಂಡು ಆಟವಾಡುತ್ತಿರುವ ವಿಚಾರದ ಕುರಿತು ಈಗಾಗಲೇ ಅಲ್ಲಲ್ಲಿ ಚರ್ಚೆಗಳು ಕೂಡಾ ನಡೆಯುತ್ತಿವೆ.


ಸ್ವರ್ಗದಿಂದ ನರಕಕ್ಕೆ ಹೋಗಿರುವ ಜಗದೀಶ್‌ ಸುಳ್ಳಿನ ಕೋಟೆಯ ಸುತ್ತಲೂ ಕಣ್ಣುಗಳು ಕಾಯುತ್ತಿವೆ.ಇದಕ್ಕೆ ಉದಾಹರಣೆಯಾಗಿ ಬಿಗ್‌ಬಾಸ್‌ ಮನೆಯಲ್ಲಿರುವ ನೀರು ಕುಡಿದು ಭೇದಿಯಾಗಿದೆ ಎಂದು ಜಗದೀಶ್‌ ಆರೋಪವನ್ನು ಮಾಡಿದ್ದಾರೆ. ನಮಗೇನೂ ಆ ರೀತಿಯಾಗಿಲ್ಲ ಎಂದು ನಟಿ ಮೋಕ್ಷಿತಾ ಹೇಳಿದ್ದಾರೆ.ಅವರ ಮಾತಿಗೆ ಸಿಟ್ಟಾದ ಜಗದೀಶ್‌ ನೀವೇನೂ ಸತ್ಯ ಹರಿಶ್ಚಂದ್ರನಾ ? ಎಂದು ಕೋಪಗೊಂಡಿದ್ದಾರೆ.


ಜಗದೀಶ್‌ ಕ್ಯಾಪ್ಟನ್‌ ಹಂಸಾರವರ ಮುಂದೆ ಪ್ರತಿಭಟನೆಯನ್ನು ಮಾಡಿದ್ದಾರೆ.ನೀವುಕೊಟ್ಟ ನೀರಿನಿಂದ ನನಗೆ ಭೇದಿಯಾಗುತ್ತಿದೆ ಎಂದು ಆರೋಪಿಸುತ್ತಿರುವಾಗ ನಟಿ ಮೋಕ್ಷಿತಾ ನಕ್ಕಿರುವ ಕಾರಣ ಇವರು ಮಾಡುತ್ತಿರುವ ಆರೋಪ ಸುಳ್ಳು ಎಂದು ತಿಳಿದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *