ʼಸಿದ್ದರಾಮಯ್ಯನೇನು ಕಡಿಮೆಯಿಲ್ಲ ನಮ್ಮ ಪ್ರಧಾನಿಯನ್ನು ನರಹಂತಕ ಎಂದಿದ್ದರು. ಆಗ ಕ್ಷಮೆಯನ್ನು ಕೇಳಿದ್ರಾ? ಹಾಗೇ ಕೇಳಿದ್ದರೆ ದೊಡ್ಡ ನಾಯಕರಾಗುತ್ತಿದ್ದರು. ಆದರೆ, ಅಧಿಕಾರ  ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿರುವ ಅವರು ತಮ್ಮ ಕಾರ್ಯಕರ್ತರನ್ನು, ಆಪ್ತರನ್ನೇ ಸೋಲಿಸಿದ್ದಾರೆʼ ಎಂದು ಸಿದ್ದರಾಮಯ್ಯನವರ ವಿರುದ್ದ ಆರೋಪಗಳ ಸುರಿಮಳೆಯನ್ನೇ ಮಾಜಿ ಸಚಿವ ಈಶ್ವರಪ್ಪ ಸುರಿಸಿದ್ದಾರೆ.

ಅಲ್ಲದೆ, ಡಾ.ಜಿ.ಪರಮೇಶ್ವರ್‌ ಅವರನ್ನು ಇವರೇ ಸೋಲಿಸಿದ್ದಾರೆ, ಇಲ್ಲ ಎಂದು ಚಾಮುಂಡೇಶ್ವರಿ ಮೇಲೆ ಆಣೆಯಿಟ್ಟು ಹೇಳಲಿ ಎಂದು ಸವಾಲನ್ನು ಎಸೆದು, ʻಸಿದ್ದರಾಮಯ್ಯ ಯಾವೆಲ್ಲಾ ಶಾಸಕರನ್ನು, ಸಚಿವರನ್ನು ಸೋಲಿಸಿದ್ದರೋ ಅವರೆಲ್ಲಾ ಟೊಂಕ ಕಟ್ಟಿ ನಿಂತಿದ್ದಾರೆ ಇವರನ್ನು ಹೀನಾಯವಾಗಿ ಸೋಲಿಸಲುʼ ಎಂದು ಈಶ್ವರಪ್ಪ ವಾಗ್ದಾಳಿಯನ್ನ ನಡೆಸಿದರು.

Leave a Reply

Your email address will not be published. Required fields are marked *