ಬೆಂಗಳೂರು, : ಇನ್ನೆನು ಚುನಾವಣೆ ಸಮೀಪಿಸುತ್ತಿದ್ದಂತೆ ಮೂರೂ ಪಕ್ಷಗಳ ಹಣಾಹಣಿ, ಕಸರತ್ತು ಮತ್ತು ಪ್ರಚಾರದ ಗಿಮಿಕ್ ಹೀಗೆ ಒಬ್ಬರಿಂತ ಮತ್ತೊಬ್ಬರು ಹೆಚ್ಚು ಎನ್ನುವ ರೀತಿಯಲ್ಲಿ ಪೈಪೋಟಿಯನ್ನು ನಡೆಸುತ್ತಿದ್ದರೆ ಇದರ ನಡುವೆ ನಟಿ ರಮ್ಯಾರನ್ನು ರಾಮನಗರ ಜಿಲ್ಲೆಯ ಕ್ಷೇತ್ರದಿಂದ ಕಣಕ್ಕಿಳಿಸಿ ಎರಡು ಪ್ರಬಲ ವಿಕೆಟ್ ಉರುಳಿಸುವ ತಂತ್ರವನ್ನು ಡಿಕೆಶಿವಕುಮಾರ್ ರೂಪಿಸಿರುವುದು ತಿಳಿದು ಬಂದಿದೆ.
ದೆಹಲಿ ಸಿಎಂ ತಮ್ಮ ಅದೃಷ್ಟಪರೀಕೆಯನ್ನು ಮಾಡಲು ಹೊರಟಿದ್ದರೆ ಕಾಂಗ್ರೆಸ್ ಎರಡು ಬಣಗಳಾಗಿ ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡುಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ನೋಡಿಕೊಂಡರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿಕೆಶಿವಕುಮಾರ್ ನಡೆಸುತ್ತಿದ್ದು ಇತ್ತ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ ನಾವೇನು ಕಮ್ಮಿಯಿಲ್ಲ ಎಂದು ಬಿಜೆಪಿ ಪಕ್ಷವು ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದ್ದು ಪ್ರಧಾನಿ ಮೋದಿ, ಗೃಹಸಚಿವರಾದ ಅಮಿತ್ ಶಾ ಸೇರಿದಂತೆ ಪ್ರಚಾರದಲ್ಲಿ ತೊಡಗಿದ್ದಾರೆ.
ಈಗಾಗಲೇ ಜೆಡಿಎಸ್ ಪಕ್ಷವೂ ಮೊದಲ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ಮತ್ತೆರಡು ಪಕ್ಷಗಳು ಯಾವಾಗ ಬಿಡುಗಡೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.