ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 106ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಬ್ಬರಿಸುತ್ತಿದೆ. ರಾಜ್ಯಾದ್ಯಂತ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿರುವಾಗಲೇ, ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ನಿವಾಸಕ್ಕೆ ನಟಿ ತ್ರಿಶಾ ಕೃಷ್ಣನ್ ಭೇಟಿ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಲ್ಚಲ್ ಎಬ್ಬಿಸಿದೆ.

ವದಂತಿಗೆ ತುಪ್ಪ ಸುರಿದ ಭೇಟಿ: ಕಳೆದ ಕೆಲವು ಸಮಯದಿಂದ ನಟ ವಿಜಯ್ ಮತ್ತು ತ್ರಿಶಾ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಕೇಳಿಬರುತ್ತಿವೆ. ಇಬ್ಬರೂ ಒಟ್ಟಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು ಎನ್ನಲಾದ ಫೋಟೋಗಳು ಈ ಹಿಂದೆ ವೈರಲ್ ಆಗಿದ್ದವು. ಈಗ ವಿಜಯ್ ರಾಜಕೀಯದಲ್ಲಿ ದೊಡ್ಡ ಯಶಸ್ಸು ಗಳಿಸುತ್ತಿದ್ದಂತೆ ತ್ರಿಶಾ ಅವರು ಅಭಿನಂದನೆ ಸಲ್ಲಿಸಲು ಅವರ ಮನೆಗೆ ಆಗಮಿಸಿರುವುದು ಈ ಹಳೆಯ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ವೈರಲ್ ವಿಡಿಯೋದಲ್ಲೇನಿದೆ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ತ್ರಿಶಾ ಅವರು ಕಾರಿನಿಂದ ಇಳಿದು ವಿಜಯ್ ನಿವಾಸದ ಒಳಗೆ ಹೋಗುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕೆಲವರು ಇದು ಇಂದಿನ ಭೇಟಿಯ ವಿಡಿಯೋ ಎನ್ನುತ್ತಿದ್ದರೆ, ಇನ್ನು ಕೆಲವರು ಇದು ಹಳೆಯ ವಿಡಿಯೋ ಇರಬಹುದು ಎಂದು ವಾದಿಸುತ್ತಿದ್ದಾರೆ.

ಗೆಲುವಿನ ಸಂಭ್ರಮದಲ್ಲಿ ವಿಜಯ್ ಪಡೆ: ಒಂದೆಡೆ ಚುನಾವಣಾ ಫಲಿತಾಂಶದಲ್ಲಿ ಟಿವಿಕೆ ಮ್ಯಾಜಿಕ್ ಸಂಖ್ಯೆಯತ್ತ ದಾಪುಗಾಲು ಹಾಕುತ್ತಿದ್ದು, ವಿಜಯ್ ಅವರ ಮನೆಯ ಮುಂದೆ ಅಭಿಮಾನಿಗಳ ದಂಡು ಜಮಾಯಿಸಿದೆ. ಪ್ರಶಾಂತ್ ಕಿಶೋರ್ ಅವರ ಭವಿಷ್ಯವಾಣಿಯಂತೆ ವಿಜಯ್ ಅವರು ದ್ರಾವಿಡ ಕೋಟೆಗಳನ್ನು ಭೇದಿಸಿರುವುದು ಈಗ ಸಾಬೀತಾಗುತ್ತಿದೆ. ಈ ಐತಿಹಾಸಿಕ ಕ್ಷಣದಲ್ಲಿ ಚಿತ್ರರಂಗದ ಆಪ್ತ ಸ್ನೇಹಿತೆಯಾಗಿ ತ್ರಿಶಾ ಅವರು ಭೇಟಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ವಿಜಯ್ ಅವರ ರಾಜಕೀಯ ಯಶಸ್ಸು ಮತ್ತು ವೈಯಕ್ತಿಕ ಜೀವನದ ಈ ಬೆಳವಣಿಗೆಗಳು ಸದ್ಯ ತಮಿಳುನಾಡಿನಾದ್ಯಂತ ಹಾಟ್ ಟಾಪಿಕ್ ಆಗಿವೆ.

Leave a Reply

Your email address will not be published. Required fields are marked *