ರಾಯಚೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿರುವ ವಿಪಕ್ಷಗಳಿಗೆ  ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, 40% ಕಮಿಷನ್‌ ಕೊಳ್ಳೆ ಹೊಡೆಯುವ ಮೂಲಕ ರಾಜ್ಯದ ಮರ್ಯಾದೆಯನ್ನು ಹಾಳುಮಾಡಿರುವವರಿಂದ ಪಾಠ ಹೇಳಿಸಿಕೊಳ್ಳುವ ದುರ್ಗತಿ ನಮಗಿಲ್ಲವೆಂದು ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಹೆಸರಿಗೆ ಮಸಿಯನ್ನು ಬಳಿದು ಅವರ ಘನತೆಗೆ ದಕ್ಕೆಯನ್ನು ತರುವಂತಹ ಕೆಲಸವನ್ನು ಮಾಡುತ್ತಿದೆ ಬಿಜೆಪಿ.ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರವನ್ನು ಅಸ್ಥಿರ ಮಾಡುತ್ತಿದ್ದು ಕರ್ನಾಟಕದ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ  ಎಂದು ಬಿಜೆಪಿಗರ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.

 ಕೋವಿಡ್ ಸಮಯದಲ್ಲಿ ಕೋಟಿ ಕೋಟಿ ಲೂಟಿ ಹೊಡೆದವರು,.40% ಕಮಿಷನ್ ಮೂಲಕ ಕರ್ನಾಟಕ ರಾಜ್ಯದ ಮರ್ಯಾದೆಯನ್ನು ಮೂರು ಕಾಸಿಗೆ  ಹರಾಜು ಹಾಕಿದವರು ನೀತಿ ಪಾಠಹೇಳಲು ಬಂದರೆ,  ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದ ಹಾಗಿರುತ್ತದೆ. ಅದರ ಅವಶ್ಯಕತೆಯಾಗಲೀ, ಅಗತ್ಯವಾಗಲೀ ನಮಗಿಲ್ಲವೆಂದಿದ್ದಾರೆ.‌

Leave a Reply

Your email address will not be published. Required fields are marked *