ಬಿಗ್‌ಬಾಸ್ ಮನೆಯಲ್ಲಿ ಕಿಚ್ಚು ಹೆಚ್ಚಾಗಿದ್ದೂ ಎಲ್ಲೆಡೆಯಲ್ಲಿಯೂ ಹರಡುತ್ತಿದೆ.ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತುಗೆ ನಾಮಿನೇಟ್ ಟಾಸ್ಕ್‌ವೊಂದನ್ನು ನೀಡಲಾಗಿತ್ತು.ಆ ಟಾಸ್ಕ್‌ನಂತೆಯೇ ಕ್ಯಾಪ್ಟನ್ ಹನುಮಂತು ಮಾನಸ, ಭವ್ಯಮತ್ತು ಗೋಲ್ಡ್ ಸುರೇಶ್ ಹೆಸರುಗಳನ್ನು ಆಯ್ಕೆಮಾಡಿ ಬಿಗ್‌ಬಾಸ್ ಮುಂದೆ ಪ್ರಸ್ತಾಪಿಸಿದ್ದಾನೆ. ಆ ನಾಮಿನೇಶನ್‌ವೇಳೆ ನೀಡಿದ ಕಾರಣಗಳಿಂದ ಮೂರು ಸ್ಪರ್ಧಿಗಳು ಅಸಮಧಾನಗೊಂಡಿದ್ದಾರೆ.
ಕ್ಯಾಪ್ಟನ್ ಹನುಮಂತು ಗೋಲ್ಡ್ ಸುರೇಶ್ ಹೆಸರನ್ನು ತೆಗೆದುಕೊಂಡಿರುವ ಕಾರಣ ಏನೆಂದರೆ ಸುರೇಶ್ ಯಾವಾಗಲೂ ಅಲ್ಲಲ್ಲಿ ಕೋಳಿ ರೀತಿ ಮಲಗಿರುತ್ತಾನೆ ಎಂದು.ಭವ್ಯಾಗೌಡ ಯಾವ ಟಾಸ್ಕ್ ನೀಡಿದರೂ ಹೆಚ್ಚು ಭಾಗಿಯಾಗುವುದಿಲ್ಲ. ಇನ್ನೂ ಮಾನಸ ಒಂಥರಾ ಬಾಂಬ್ ಇದ್ದಂಗೆ ಸೌಂಟ್ ಮಾಡುವ ವೇಳೆ ಟುಸ್ ಆಗುತ್ತೆ ಎಂಬ ಕಾರಣವನ್ನು ನೀಡಿ ಮೂವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹನುಂಮಂತು ಕೊಟ್ಟಿರುವ ಕಾರಣವನ್ನು ಕೇಳಿ ಡೈರೆಕ್ಟಾಗಿ ನೀವು ಕೊಟ್ಟಿರುವ ಕಾರಣ ಚೆನ್ನಾಗಿಲ್ಲವೆಂದಿದ್ದಾರೆ. ಈ ಕಾರಣ ತಿಳಿದ ಮಾನಸ ನಿನ್ನಂತ ಗೇಮ್ ಪ್ಲಾನರ್ ಇಡೀ ಮನೆಯಲ್ಲಿ ಯಾರಿಲ್ಲ ಕಣೋ ಎಂದು ಕಣ್ಣೀರಿಟ್ಟಿದ್ದಾರೆ. ಇನ್ನೂ ಗೋಲ್ಡ್ ಸುರೇಶ್ ನಾವು ಅಂದುಕೊಂಡಿರುವ ಹಾಗೆ ಹನುಮಂತು ಇಲ್ಲ ಎಂಬುದನ್ನು ಚೈತ್ರಾ ಕುಂದಾಪುರ ಹತ್ತಿರ ಹೇಳಿದ್ದಾರೆ .
ಮನೆಯ ಸದಸ್ಯರನ್ನು ಎದುರು ಹಾಕಿಕೊಂಡಿರುವ ಹನುಮಂತು ಇನ್ಮುಂದೆ ಯಾವ ರೀತಿ ಆಟ ಆಡ್ತಾರೆ, ಮತ್ತು ಅಲ್ಲಿರುವ ಸ್ಪರ್ಧಿಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
ಬಿಗ್‌ಬಾಸ್ ಶುರುವಾಗಿ ನಾಲ್ಕು ವಾರಗಳು ಕಳೆದು ನಾಲ್ಕು ಜನರು ಮನೆಯಿಂದ ಔಟ್ ಆಗಿದ್ದಾರೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.