ಮೊಮೋಸ್ ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿ, 20 ಮಂದಿ ಜನರು ಅಸ್ವಸ್ಥರಾದ ಘಟನೆಯೂ ಹೈದರಾಬಾದ್‌ನಲ್ಲಿ ನಡೆದಿರುವುದು ತಿಳಿದುಬಂದಿದೆ.
ಈ ಘಟನೆಯು ಬಂಜಾರ ಹಿಲ್ಸ್ ನಂದಿನಗರದಲ್ಲಿ ನಡೆದಿದ್ದು,ಮೊಮೋಸ್‌ನ್ನು ಸೇವಿಸಿ ಮೃತಪಟ್ಟಿದ್ದು, 20ಜನರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಉತ್ತರ ಭಾರತದ ಜನಪ್ರಿಯ ಆಹಾರ ತಿನಿಸುಗಳಲ್ಲಿ ಒಂದಾದ ಮೊಮೋಸ್ ಎಲ್ಲರ ಅಚ್ಚಮೆಚ್ಚಿನ ತಿನಿಸಾಗಿದೆ. ಮೊಮೋಸ್‌ನಲ್ಲಿ ಎರಡು ವಿಧಗಳಿವೆ. ಒಂದು ವೆಜ್ ಮೊಮೋಸ್. ಎರಡು ನಾನ್‌ವೆಜ್ ಮೊಮೋಸ್. ಈ ಮೊಮೋಸ್‌ಗಳನ್ನು ಮೈದಾ ಹಿಟ್ಟಿನಲ್ಲಿ ತಯಾರಿಸುತ್ತಾರೆ.ಮೈದಾ ಹಿಟ್ಟಿನಲ್ಲಿ ಕಾರ್ಬೋಹೈಡ್ರೇಟ್ಗಳು ಹಾಗೂ ಬೆಂಜಾಯ್ಡ್ ಪೆರಾಕ್ಸೈಡ್ ಹೇರಳವಾಗಿರುತ್ತದೆ.ಮೋಮೊಸ್ ಮೃದುವಾಗಿಡಲು ಅಲೋಕ್ಸಾನ್ ಎಂಬ ದ್ರವವನ್ನು ಮಿಕ್ಸ್ ಮಾಡಲಾಗುತ್ತದೆ .ಇದು ಮನುಷ್ಯನ ಆರೋಗ್ಯಕ್ಕೆ ತುಂಬಾ ಅಪಾಯಕಾರಕವಾಗಿದೆ.