ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ನಡೆದ ಷಡ್ಯಂತ್ರದ ಹಿಂದೆ ತಮಿಳುನಾಡಿನ ಸಂಸದ ಸಸಿಕಾಮತ್ ಸೆಂಥಿಲ್ರವರ ಕೈವಾಡವಿದೆ ಎಂದು ಜನಾರ್ಧನ ರೆಡ್ಡಿಯ ಆರೋಪಕ್ಕೆ ಸಸಿಕಾಂತ್ ಎಂಥಿಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಸಿಕಾಂತ್ ಸೆಂಥಿಲ್ ಕೇಸ್ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜನಾರ್ಧನ ರೆಡ್ಡಿ, ನನ್ನ ವಿರುದ್ದ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಕೇಸ್ನ್ನು ಎದುರಿಸಲು ನಾನು ಸಿದ್ದ.ನನ್ನ ಮೇಲೆ ಅವರು ಕೇಸ್ ಹಾಕಿರುವುದನ್ನು ನಾನು ಒಪ್ಪುತ್ತೇನೆ. ಸಮಾಜದ ಐಕ್ಯತೆಯನ್ನು ಒಡೆಯಲು ಸಸಿಕಾಂತ್ ಸೆಂಥಿಕ್ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಕೇಸ್ ಹಾಕಿ ವಿಷಯವನ್ನು ಡೈವರ್ಟ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ಷಡ್ಯಂತ್ರವನ್ನು ರೂಪಿಸಿದ್ದಾರೆ. ರಾಜ್ಯದ ಗಡಿ ದಾಟಿ ಷಡ್ಯಂತ್ರ ಮಾಡಿದ್ದಾರೆ. ಸತ್ಯಾಂಶವಿಲ್ಲದೇ ನಾನು ಯಾವತ್ತೂ ಯಾರನ್ನು ದೂಷಿಸಿಲ್ಲ ಎಂದಿದ್ದಾರೆ.
