ಬೆಂಗಳೂರು:ವೈಟ್ನರ್‌ ವಿಚಾರವಾಗಿ ವಿಧವಿಧವಾಗಿ ಸಂಚನ್ನು ರೂಪಿಸುವ ಸಂಚು ಉಲ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೌದು, ಮುಡಾಗೆ ಬದಲಿ ಭೂಮಿ ನೀಡುವಂತೆ ನೀಡಿದ ಅರ್ಜಿಯಲ್ಲಿ ವೈಟ್ನರ್‌ ಹಚ್ಚಿರುವುದಕ್ಕೆ ನಾನಾ ಅರ್ಥವನ್ನು ಕಲ್ಪಿಸಿ, ನನ್ನ ವಿರುದ್ದ ಮುಗಿಬಿದ್ದಿದ್ದ ಬಿಜೆಪಿ-ಜೆಡಿಎಸ್‌ ಸ್ವಯೋಘೋಷಿತ ಕಾನೂನು ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲವರು “ಟಾರ್ಚ್‌ ಹಿಡಿದವರು ಯಾರು? ವೀಡಿಯೋ ಮಾಡಿದ್ದು ಯಾರು? ಎಂಬ ತಲೆಬುಡವಿಲ್ಲದ ಪ್ರಶ್ನೆ ಕೇಳುತ್ತಾ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *