ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆಪ್ತರು, ಸಂಪಟದ ಹಿರಿಯ ಸಹೋದ್ಯೋಗಿಯಾಗಿರುವ ರಾಜಣ್ಣನವರನ್ನು ವಜಾ ಮಾಡುವ ಮಹಾ ಅಪರಾಧವಾದರೂ ಏನು? ಎಂದು ರಾಜ್ಯ ಜನತೆ ಪ್ರಶ್ನೆ ಮಾಡುತ್ತೀದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜಣ್ಣನವರು ಮಾಡಿದ ತಪ್ಪಾದರೂ ಏನು? ಕಾಂಗ್ರೆಸ್‌ನವರು ವಜಾ ಮಾಡಿರುವ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಯಾವ ಕಾರಣಕ್ಕಾಗಿ ಅವರನ್ನು ಕಿತ್ತಾಕಿದ್ದಾರೆ?ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಹುಲ್ ಗಾಂಧಿಯವರಿಗೆ ಪರಿಶಿಷ್ಟ ಪಂಗಡದವರ ಬಗ್ಗೆ ಒಲವು ಇಷ್ಟೇನಾ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಪಕ್ಷದ ಮೇಲೆ ಆರೋಪಗಳನ್ನು ಹೊರಿಸಿದರು. ಬಿಜೆಪಿ ಪಕ್ಷವೂ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂದು ಜನತೆಯ ಮುಂದೆ ಬಿಂಭಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
