ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ದರ್ಶನ್‌ಗೆ ಹೈಕೋರ್ಟ್ ಇಂದು ಮಧ್ಯಂತರ ಬೇಲೆ ಮಂಜೂರು ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಆರೋಪಿ ದರ್ಶನ್ ವಿರುದ್ದ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ರೇಣುಕಾಸ್ವಾಮಿ ಕುಟುಂಬದವರು ತಿಳಿಸಿದ್ದಾರೆ.
ದರ್ಶನ್‌ಗೆ ಜಾಮೀನು ಸಿಕ್ಕಿರುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಸ್ವಾಮಿ ತಂದೆ, ಹೈಕೋರ್ಟ್ ನೀಡಿರುವ ತೀರ್ಪಿಗೆ ನಾವು ತಲೆಬಾಗುತ್ತೇವೆ.ಆದರೆ ಕೊಲೆ ಆರೋಪಿ ದರ್ಶನ್ ವಿರುದ್ದ ಹೋರಾಟವನ್ನು ಮಾಡುತ್ತೇವೆ, ಮಾಡುತ್ತಲೇ ಇರುತ್ತೇವೆ ಎಂದು ಹೇಳಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸಲ್ಲಿಸಿದಂತಹ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದಂತಹ ಹೈಕೋರ್ಟ್ ಮಧ್ಯಂತರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ದರ್ಶನ್‌ಗೆ ಜಾಮೀನು ಸಿಕ್ಕಿರುವ ವಿಷಯ ತಿಳಿದ ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ಕಾದು ಕುಳಿತಿದ್ದಾರೆ