ಶಿವಮೊಗ್ಗ:ಹಿಂದೂಗಳ ಏಳಿಗೆಗಾಗಿ ದುಡಿಯುವವರ, ಹಿಂದೂ ಪರವಾಗಿರುವವರಿಗೆ ಮತವನ್ನು ಹಾಕಿ ಇಲ್ಲವಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪರಿಸ್ಥಿತಿ ನಮಗೂ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸಲ್ಮಾನರು ಮಾಡುತ್ತಿರುವ ಕ್ರೌರ್ಯಗಳು, ಅಚಾತುರ್ಯಗಳನ್ನು ಕಂಡರೂ ಕಾಣದಂತೆ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ.ಮುಸಲ್ಮಾನರು ಒಂದಲ್ಲ ಒಂದು ಅನ್ಯಾಯವನ್ನು ಮಾಡುತ್ತಿದ್ದಾರೆ.ದೇವಸ್ಥಾನ,ಮಠ, ಸಾಧು ಸಂತರು, ರೈತರ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ವಶಪಡಿಸಿಕೊಳ್ಳುತ್ತಿದ್ದಾರೆ.ಇದೆಲ್ಲಾ ವಕ್ಫ್ ಆಸ್ತಿಯಾಗಲು ನಾವು ಬಿಡುವುದಿಲ್ಲವೆಂದು ಒಬ್ಬ ಕಾಂಗ್ರೆಸ್ ನಾಯಕನ ಬಾಯಲ್ಲೂ ಬಂದಿಲ್ಲ.ಆದ್ದರಿಂದ ಹೇಳುತ್ತಿದ್ದೇನೆ ಹಿಂದೂಗಳ ಪರವಾಗಿ, ಹಿಂದೂಗಳ ಏಳಿಗೆಗಾಗಿ ಶ್ರಮಿಸುವವರಿಗೆ ಮತ ನೀಡಿ ಇಲ್ಲವಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪರಿಸ್ಥಿತಿ ನಮಗೂ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ ನೋಡಿದ್ದಾರೆ.