ಬೆಂಗಳೂರು: ಸಾಮಾಜಿಕ ಜಾಲಾತಾಣಗಳಲ್ಲಿ ವಿಜಯಲಕ್ಷ್ಮಿಗೆ ದರ್ಶನ್‌ಗೆ ಅಶ್ಲೀಲ ಸಂದೇಶ ಮಾಡಿರುವ ಹಿನ್ನೆಲೆ ಸಿಟಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ವಾರ್‌ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿಗಳನ್ನು ಟಾರ್ಗೆಟ್‌ ಮಾಡಿ ತೀರಾ ವೈಯಕ್ತಿಕವಾಗಿ ನಿಂದನೆ ಮಾಡಿ ಮೆಂಟಲಿ ಡಿಸ್ಟ್‌ರ್ಬ್‌ ಮಾಡುವಂತಹ ಹೀನ ಕೃತ್ಯಗಳು ನಡೆಯುತ್ತಿವೆ.ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲವಾಗಿ ಮೆಸೆಜ್‌ ಮಾಡಿರುವ ಹಿನ್ನೆಲೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಸೈಬರ್‌ಕ್ರೈಂ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಸಿಸಿಬಿ ಮುಖ್ಯಸ್ಥ ಅಜಯ್‌ ಹಿಲೋರಿಗೆ ದೂರನ್ನು ನೀಡಿದ್ದಾರೆ. ವಿಜಯಲಕ್ಷ್ಮಿಗೆ ದರ್ಶನ್‌ರಿಂದ ದೂರನ್ನು ಸ್ವೀಕರಿಸಿದ ಎಸಿಪಿ ಉಮೇಶ್‌ 15ಕ್ಕೂ ಹೆಚ್ಚು ಇನ್ಸ್ಟಾಗ್ರಾಂ ಖಾತೆಗಳಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಗೌರವಕ್ಕೆ ದಕ್ಕೆ, ನಿಂದನೆ, ಐಟಿ ಆಕ್ಟ್‌  ಮತ್ತು ಬೆದರಿಕೆ ಕರೆ ಹೀಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸನ್ನು ದಾಖಲಿಸಿದ್ದಾರೆ. ಕೇಸನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *