ವಿಜಯಲಕ್ಷ್ಮಿ ದರ್ಶನ್ಗೆ ಅಶ್ಲೀಲ ಕಮೆಂಟ್ ಮಾಡಿರುವ ಆರೋಪಿಗಳ ಪತ್ತೆಗೆ 3 ಸಿಸಿಬಿ ಪೊಲೀಸರ ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಿರುದ್ದ ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆ ಆರೋಪಿಗಳ ಹಿಂದೆ ಬಿದ್ದಿದ್ದಾರೆ. ವಿಜಯಲಕ್ಷ್ಮಿ ದರ್ಶನ್ಗೆ ಕೆಟ್ಟದಾಗಿ ಕಮೆಂಟ್ ಮಾಡಿರುವವರ ವಿರುದ್ದ 3 ವಿಷೇಶ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಜಾಲವನ್ನು ಬೀಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ಗೆ ಕಮೆಂಟ್ ಮಾಡಿದ 18 ಖಾತೆಗಳನ್ನು ಪರಿಶೀಲನೆ ಮಾಡುವ ವೇಳೆ ಅವರ ಅಕೌಂಟ್ಗಳು ಡಿಲೀಟ್ ಮಡಿದ್ದಾರೆ. ಮತ್ತೆ ಕೆಲವರು ಅಕೌಂಟುಗಳನ್ನು ಡಿಲೀಟ್ ಮಾಡುವುದಲ್ಲದೆ, ಪೋನ್ಗಳನ್ನು ಸ್ವಿಚ್ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಆದ್ದರಿಂದ ದೂರಿನಲ್ಲಿರುವ ಖಾತೆಗಳ ಡಿಟೇಲ್ಸ್ ನೀಡುವಂತೆ ಇಸ್ಟಾಗ್ರಾಂ ಸಂಸ್ಥೆಗೆ ಲೆಟರ್ ಬರೆದಿದ್ದು, ಇನ್ನೆರಡು ದಿನಗಳಲ್ಲಿ ಆ ಎಲ್ಲಾ ಅಕೌಂಟ್ಗಳ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ವಿಜಯಲಕ್ಷ್ಮಿ ದರ್ಶನ್ಗೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ದ ದೂರು ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಅಕೌಂಟ್ಗಳನ್ನು ಡಿಲೀಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.
