ಬಿಗ್‌ಬಾಸ್‌ ಕಾರ್ಯಕ್ರಮದ ನಿರೂಪಕರಾಗಿರುವಂತಹ ಕಿಚ್ಚ ಸುದೀಪ್‌ರವರು ತಾಯಿಯ ಅಗಲಿಕೆಯಿಂದ ಈ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಅವರ ಬದಲಾಗಿ ಸ್ಯಾಂಡಲ್‌ವುಡ್‌ನ ಇಬ್ಬರು ಕಲಾವಿದರು ನಡೆಸಿಕೊಡ್ತಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಹೌದು ತಾಯಿಯನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಕಿಚ್ಚ ಸುದೀಪ್‌ ವಾರಾಂತ್ಯದಲ್ಲಿ ಪಂಚಾಯ್ತಿಯನ್ನು ನಡೆಸಿ ಎಲ್ಲರಿಗೂ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು. ಆದರೆಈ ವಾರ ಕಿಚ್ಚ ಸುದೀಪ್‌  ಬದಲಾಗಿ ಇಬ್ಬರು ಹೊಸ ಅತಿಥಿಗಳು ಮನೆಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಶನಿವಾರದಂದು ಬಿಗ್‌ಬಾಸ್‌ ಮನೆಯ ಸ್ಪರ್ದಿಗಳ ಜೊತೆ ಮಾತುಕತೆ ನಡೆಸಲು ನಿರ್ದೇಶಕರಾದ ಯೋಗರಾಜ್‌ ಭಟ್‌ ದೊಡ್ಮನೆಗೆ ಎಂಟ್ರಿಯಾಗುತ್ತಿದ್ದು ಸ್ಪರ್ಧಿಗಳ ಜೊತೆ ಮಾತು, ಹರಟೆ, ವಿಚಾರದ ಕುರಿತು ಚರ್ಚೆ ನಡೆಸಿ ಕಿಚ್ಚ ಸುದೀಪ್‌ರವರ ಸ್ಥಾನವನ್ನು ತುಂಬಲಿದ್ದಾರೆಮತ್ತು ಮಾತು-ಹರಟೆಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

Leave a Reply

Your email address will not be published. Required fields are marked *