ತಿಂಗಳ ಹಿಂದೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ Emergency Exit ತೆಗೆದು ಪ್ರಯಾಣಿಕರನ್ನು ಆತಂಕಕ್ಕೆ ಸಿಲುಕಿಸಿದ್ದರು ಎಂದು ಹಲವಾರು ಪತ್ರಿಕೆಗಳು ವರದಿ ಮಾಡಿವೆ. ಅದು ನಿನ್ನೆಯಿಂದ ವೈರಲ್‌ ಆಗಿದ್ದು, ಎಲ್ಲೆಡೆ ಟೀಕೆ ಮತ್ತು ಕಾಲೆಳೆತದ ಮೀಮ್ಸ್‌ಗಳು, ಟ್ರೋಲ್‌ಗಳು ಶುರುವಾಗಿವೆ. ಈ ಬಗ್ಗೆ ತೇಜಸ್ವಿ ಸೂರ್ಯ ಅವರ ಹೆಸರು ಬಳಸದೆ ʼಕನ್ನಡ ಪ್ರಭʼ ಪತ್ರಿಕೆ ಮತ್ತು ಇತ್ತೀಚೆಗೆ ತಾನೇ ಅದಾನಿ ಒಡೆತನದ ಪಾಲಾಗಿರುವ NDTV ಮಾಡಿರುವ ಸುದ್ದಿಯೂ ಟ್ರೋಲ್‌ ಆಗಿದ್ದು, ʼಗೋಧಿ ಮೀಡಿಯಾʼ ಎಂಬ ಹಣೆಪಟ್ಟಿಯಲ್ಲಿ ಓಡಾಡುತ್ತಿದೆ.

ಕೆಲವೊಂದು ಟ್ರೋಲ್‌ಗಳಲ್ಲಿ ʼಮಸಾಲೆ ದೋಸೆ ತಿನ್ನಲು ಡೋರ್‌ ತೆಗೆದೆ ಕ್ಷಮಿಸಿಬಿಡಿ ಫ್ರೆಂಡ್ಸ್‌ʼ ಎಂಬ ವ್ಯಂಗ್ಯದ ಪೋಸ್ಟ್‌ಗಳು ಹರಿದಾಡುತ್ತಿವೆ! ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅವರ ಅಜ್ಞಾನದಿಂದ ಸ್ವತಃ ತಾವೇ ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದು ಸುಳ್ಳಲ್ಲ!

ವಿಮಾನ ಕೆಟ್ಟು ನಿಂತ ಸಂರ್ದರ್ಭದಲ್ಲಿ ಅಥವಾ ಅದರ ಮುಖ್ಯ ದ್ವಾರಗಳು ತೆರೆದುಕೊಳ್ಳದಿದ್ದ ಸಂದರ್ಭದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲು ಈ Emergency Exit ಬಳಸುತ್ತಾರೆ. ಅಂದಹಾಗೆ ಈ ಎಕ್ಸಿಟ್‌ನಲ್ಲಿ ವಿಮಾನದಿಂದ ಕೆಳಗಿಳಿಯಲು ಮೆಟ್ಟಿಲುಗಳು ಇರುವುದಿಲ್ಲ. ಬದಲಿಗೆ ಗಾಳಿ ತುಂಬಿದ ಬಲೂನಿನ ಜಾರು ಸೇತುವೆ ಇರುತ್ತದೆ. ಎಕ್ಸಿಟ್‌ನಿಂದ ಜಾರಿಕೊಂಡು ನೆಲಕ್ಕೆ ತಲುಪಬಹುದು. ಅದೂ ವಿಮಾನ ನೆಲದಲ್ಲಿ ಇದ್ದಾಗ ಮಾತ್ರ ಈ ಬಲೂನಿನ ಜಾರು ಸೇತುವೆ ತಂತಾನೇ ತೆರೆದುಕೊಳ್ಳುತ್ತದೆ. ಆದರೆ ಹಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಇದು ತೆರೆದುಕೊಳ್ಳುವುದಿಲ್ಲ. ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗಳು ಪ್ಯಾರಾಚೂಟ್‌ ಮೂಲಕ ಕೆಳಕ್ಕೆ ದುಮುಕುವ ಸಾಹಸ ಮಾಡಬೇಕಷ್ಟೆ.

Emergency Exit ಬಗೆಗಿನ ಡೆಮೋ ವಿಡಿಯೋವೊಂದನ್ನು ATR ಎಂಬ ಸಂಸ್ಥೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಮಾಡಿದ್ದು, ಆ ವಿಡಿಯೋ ಲಿಂಕ್‌ ಇಲ್ಲಿದೆ.

Leave a Reply

Your email address will not be published. Required fields are marked *