ಬೆಂಗಳೂರು: ಕೆಲವು ದಿನಗಳಿಂದ ಎಸ್‌ ಸುರೇಶ್‌ ಆಸ್ಪತ್ರೆಯಲ್ಲಿ ಆಡ್ಮಿಟ್‌ ಆಗಿದ್ದಾರೆ ಈ ವಿಷಯದ ಕುರಿತು ಅನಗತ್ಯ ವದಂತಿಗಳು ಗಮನಿಸಿದ ಅವರು ನಾನು ಆರೋಗ್ಯವಾಗಿದ್ದೇನೆ. ಸತ್ಯಕ್ಕೆ ದೂರವಾಗಿರುವ ವದಂತಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಉಹಾಪೋಹಗಳಿಗೆಲ್ಲಾ ಸ್ವತಃ ಸುರೇಶ್‌ ಕುಮಾರ್‌ಅವರೇ ಸ್ಪಷ್ಟನೆಯನ್ನು ನೀಡಿ, ನಾನು ಆರೋಗ್ಯವಾಗಿದ್ದೇನೆಂದು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಣೆಯನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ತನ್ನನ್ನು ಚಿಕನ್‌ ಗೂನ್ಯ ಬಾಧಿಸಿದ್ದ ಕಾರಣ , ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದೇನೆ . ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಗುಣಮುಖನಾಗಿ ವಿಶ್ರಾಂತಿಯಲ್ಲಿದ್ದೇನೆ . ಕಾಳಜಿಯಿರುವ ಹಿತೈಷಿಗಳು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ ಎಂದಿದ್ದಾರೆ.

Leave a Reply

Your email address will not be published. Required fields are marked *