ಸಾಮಾಜಿಕ ಜಾಲಾತಾಣಗಳಲ್ಲಿ ದರ್ಶನ್ ಸುದೀಪ್ ಫ್ಯಾನ್ಸ್ ವಾರ್ ನಡೆಯುತ್ತಿದೆ.ಅಶ್ಲೀಲ ಸಂದೇಶಗಳನ್ನು ಸೆಂಡ್ ಮಾಡಿದವರ ವಿರುದ್ದ ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಈ ಎಲ್ಲಾ ಗೊಂದಲಗಳ ನಡುವೆ ಕಿಚ್ಚ ಸುದೀಪ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ದರ್ಶನ್ ಸುದೀಪ್ ಜೊತೆಯಿರುವ ಪೋಟೋವೊಂದನ್ನು ಹಂಚಿಕೊಂಡು ದರ್ಶನ್‌ರವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್‌ರವರ ಮಾರ್ಕ್ ಚಿತ್ರದ ಇವೆಂಟ್ ವೇಳೆ ಯುದ್ದಕ್ಕೆ ಸಿದ್ದ ಎಂಬ ಹೇಳಿಕೆಯನ್ನು ನೀಡಿದ್ದು, ಇದನ್ನು ದರ್ಶನ್ ವಿರುದ್ದವಾಗಿ ಹೇಳಿಕೆ ನೀಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಕೋಪಗೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಯುದ್ದಕ್ಕೆ ನಾವೂ ಯಾವಾಗಲು ಸಿದ್ದ ಚಿನ್ನಾ ಎಂದು ಟಾಂಗ್ ನೀಡಿದ್ದಾರೆ.ಈ ಹೇಳಿಕೆಗೆ ವಿಜಯಲಕ್ಷ್ಮಿ ದರ್ಶನ್ ಕೂಡಾ ತಿರುಗೇಟನ್ನು ನೀಡಿದ್ದರು.
ಈ ಎಲ್ಲಾ ಗೊಂದಲಕ್ಕೂ ಉತ್ತರವೆಂಬಂತೆ ಸುದೀಪ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ನಾನೂ ಯಾವಾಗಲು ಒಳ್ಳೆಯದನ್ನೇ ಬಯಸುತ್ತೇನೆ ಎಂದು ಹೇಳುವುದರ ಮೂಲಕ ನಾವಿಬ್ಬರೂ ಒಳ್ಳೇಯ ಸ್ನೇಹಿತರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
