ಬೆಂಗಳೂರು: ಕಾಂಗ್ರೆಸ್‌ ನಾಯಕರ ಗುದ್ದಾಟ ಬಿಗ್‌ಬಾಸ್‌ ಶೋಗಿಂತ ಏನು ಕಮ್ಮಿಯಿಲ್ಲ: ಆರ್‌.ಅಶೋಕ್‌

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಜಗಳವನ್ನು ಬಿಗ್‌ಬಾಸ್‌ ಶೋಗೆ ಹೋಲಿಕೆ ಮಾಡಿದ್ದಾರೆ.ಬಿಗ್‌ಬಾಸ್‌ ರಿಯಾಲಿಟಿ ಶೋ, ಕಾಂಗ್ರೆಸ್‌ ನಾಯಕರದ್ದು, ರಿಯಲ್‌ ಶೋ ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಆರ್.‌ ಅಶೋಕ್‌ , ಕಾಂಗ್ರೆಸ್‌ ನಾಯಕರು ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಜಗಳವಾಡಿದಂತೆ ಜಗಳವಾಡುತ್ತಾ ಸಿಎಂ ಸೀಟಿಗಾಗಿ ಒಬ್ಬರ ಮೇಲೊಬ್ಬರು ಕೆಸರನ್ನು ಎರಚಿಕೊಳ್ಳುತ್ತಿದ್ದಾರೆ.

ಇತ್ತ ಡಿಸಿಎಂ ಡಿಕೆಶಿವಕುಮಾರ್‌ ಕೊಟ್ಟ ಮಾತನು ತಪ್ಪಿ ನಡೆದರೆ ಮೆಚ್ಚನಾ ಆ ಪರಮಾತ್ಮನು ಎಂದು ಪುಣ್ಯಕೋಟಿಯ ಕಥೆಯನ್ನು ನೆನೆಪಿಸಿದರೆ, ಇತ್ತ ಸಿಎಂ ಸಿದ್ದರಾಮಯ್ಯ ನಾನು ಯಾರಿಗೂ ಮಾತು ನೀಡಿಲ್ಲವೆಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಈ ಕಾಂಗ್ರೆಸ್‌ ರಿಯಾಲಿಟಿ ಶೋನಲ್ಲಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಮತ್ತು ಕೆ.ಸಿ.ವೇಣುಗೋಪಾಲ್‌ ಪ್ರಾಯೋಜಕರಾದರೆ, ಸತೀಶ್‌ ಜಾರಕಿಹೊಳೀ ಮತ್ತು ಡಾ.ಜಿ.ಪರಮೇಶ್ವರ್‌ ವೈಲ್ಡ್‌ ಕಾರ್ಡ್‌ ಎಂಟ್ರಿಗೆ ವೇಯ್ಟ್‌ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *