ವಿಶ್ವದಲ್ಲಿ ಪ್ರಾಣಿ, ಸಸ್ಯ, ಕಲ್ಲು, ಮಣ್ಣಿನ ಅದೆಷ್ಟೋ ಪ್ರಬೇಧಗಳಿವೆ. ಒಂದೊಂದೂ ತನ್ನದೇ ಆದ ಅಸ್ಮಿತೆಯನ್ನು, ನಿಗೂಢತೆಯನ್ನು, ವಿಸ್ಮಯತೆಯನ್ನು ಕಾಪಾಡಿಕೊಂಡು ಬಂದಿರುತ್ತವೆ. ಮನುಷ್ಯನೊಬ್ಬನನ್ನು ಬಿಟ್ಟು ಮಿಕ್ಕೆಲ್ಲಾ ಚರಾಚರ ವಸ್ತುಗಳು, ಜೀವಿಗಳು ಪ್ರಕೃತಿಗೆ ಪೂರಕವಾಗಿ ಜೀವಿಸುತ್ತಿವೆ.
ಮನುಷ್ಯ ಈ ಭೂಮಿಯಿಂದ ಸಂಪೂರ್ಣವಾಗಿ ಕಣ್ಮರೆಯಾದ ಕೇವಲ ಆರು ತಿಂಗಳಲ್ಲಿ ಎಂಥ ನಗರದಲ್ಲೂ ಕಾಡು ಬೆಳೆಯಲು ಪ್ರಾರಂಭಿಸುತ್ತದೆ. ಆದರೆ, ಜೇನುನೊಣಗಳು ಇಲ್ಲವಾದ ಆರೇ ಆರು ತಿಂಗಳಲ್ಲಿ ಭೂಮಿಯು ಮರುಭೂಮಿಯಾಗಲು ಪ್ರಾರಂಭಿಸುತ್ತದೆ. ಈ ಸತ್ಯವನ್ನು ಅರಗಿಸಿಕೊಂಡು ಮನುಷ್ಯ ಈ ಭೂಮಿಯ ಮೇಲೆ ಇತರೆ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳನ್ನು ಬದುಕಲು ಬಿಡಬೇಕಿದೆ.
ಜಗತ್ತಿನಲ್ಲಿರುವ ಸಸ್ಯ ಸಂಕುಲದ ಹಲವಾರು ವಿಸ್ಮಯಕಾರಿ ಮರಗಿಡಗಳ ಚಿತ್ರಗಳು ನಿಮಗಾಗಿ…