ಬೆಂಗಳೂರು: ಜನವರಿ 25ಕ್ಕೆ ನಡೆಯುವ ಅಹಿಂದಾ ಸಮಾವೇಶದ ವಿಚಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಜೆ.ಪಿ.ಭವನದಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಸಿಎಂ ಸಿದ್ದರಾಮಯ್ಯನವರನ್ನು ರಾಜಕೀಯಕ್ಕೆ ಪರಿಚಯಿಸಿದ್ದು ನಾನು ಎಂದು ಯಾವತ್ತಿಗೂ ಹೇಳುವುದಿಲ್ಲ ಬದಲಾಗಿ ಅದನ್ನು ಅವರೇ ಮನವರಿಕೆ ಮಾಡಿಕೊಳ್ಳಲಿ. ನನ್ನ ವಿಚಾರವಾಗಿ ಏನೇ ಹೇಳಿಕೆ ನೀಡಿದ್ರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯನವರ ಮಗ ಸಾವನ್ನಪ್ಪಿದಾಗ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯದಲ್ಲಿ ನಿಮ್ಮ 2ನೇ ಮಗನನ್ನು ರಾಜಕೀಯಕ್ಕೆ ಕರೆತನ್ನಿ ಎಂದು ಸಲಹೆ ನೀಡಿದ್ದೆ. ಕೋಲಾರ, ಬಾದಾಮಿ, ಮೈಸೂರು,ಹೀಗೆ ಯಾವ ಕ್ಷೇತ್ರ ಎಂದು ಚರ್ಚೆಗಳು ನಡೆದವು. ನೀವು ಅಹಿಂದ ನಾಯಕರು ಆದ್ರೂ ಒಂದು ಕ್ಷೇತ್ರಕ್ಕೆ ಹುಡುಕಾಟ ಮಾಡಿದ್ರಿ ಎಂದು ಹೇಳಿದ್ದಾರೆ.
ನೀವು ಅಹಿಂದ ನಾಯಕರಾಗಿದ್ದರೂ ಎಲ್ಲಿ ಬೇಕಾದರೂ ನೀವು ಸ್ಪರ್ಧಿಸಬಹುದಿತ್ತು ಆದರೂ ನಿಮ್ಮ ಮಗ ಬಿಟ್ಟುಕೊಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ. ದೇವೇಗೌಡರು ಮೂಲೆಗುಂಪಾಗಿದ್ದಾರೆ ಏನು ಮಾತನಾಡುವುದಿಲ್ಲವೆಂದು ತಿಳಿದಿದ್ದೀರಾ ನಾನು ಗಟ್ಟಿ ಮನಸ್ಸು ಮಾಡಿದ್ದೇನೆ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.
