ಒಳಮೀಸಲಾತಿಗೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಿರುವ ಚಿತ್ರನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಅವರು ʼಸಿದ್ದರಾಮಯ್ಯ ಕುತಂತ್ರಿʼ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಚೇತನ್ ಬರೆದ ಪೋಸ್ಟ್ ಹೀಗಿದ್ದು, ಅವರ ಪೋಸ್ಟಿಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚೇತನ್ ಅವರ ಫೇಸ್‌ಬುಕ್ ಪೋಸ್ಟ್ ಹೀಗಿದೆ:
ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮಗೆ ಒಳಮೀಸಲಾತಿ ಬಗ್ಗೆ ಸುಳಿವೇ ಇಲ್ಲ ಎಂದು ನನ್ನ ಬಳಿ ಹೇಳುತ್ತಾರೆ.
ಒಳಮೀಸಲಾತಿ ಬಗ್ಗೆ ಅರ್ಥ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಾವರು ತಾವು ಉದ್ದೇಶಪೂರ್ವಕವಾಗಿ ಅದನ್ನ ತಂದಿಲ್ಲ ಎಂದು ವಿಡಿಯೋ ಮುಖಾಂತರ ಹೇಳಿದ್ದಾರೆ.
ಬೊಮ್ಮಾಯಿಯಂಥ ಅಜ್ಞಾನಿಗೆ ಕಲಿಸಬಹುದು, ಆದರೆ ಸಿದ್ದರಾಮಯ್ಯನವರಂತಹ ಕುತಂತ್ರಿಯನ್ನು ನಂಬಲು ಸಾಧ್ಯವೇ ಇಲ್ಲ.