ಚನ್ನಪಟ್ಟಣ: ಸಿಎಂ ಸಿದ್ದರಾಮಯ್ಯನವರು ಪಂಜರದಲ್ಲಿರುವ ಗಿಳಿಯಂತೆ ಆಗಿದ್ದಾರೆ, ಅವರ ಕೈಯಲ್ಲಿ ಯಾವ ಅಧಿಕಾರನೂ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿಂದು ಚುನಾವಣೆ ಪ್ರಚಾರದ ಸಮಯದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯನವರು ಪಂಜರದಲ್ಲಿರುವ ಗಿಳಿಯಾಗಿದ್ದಾರೆ. ಯಾರು ಏನು ಹೇಳ್ತಾರೆ ಅದನ್ನು ಅವರು ಮಾಡುತ್ತಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿಲ್ಲ. ಯಾರು ಈ ಗೇಮ್‌ನ ಮಾಸ್ಟರ್ ಮೈಂಡ್ ಎನ್ನುವುದು ತಿಳಿದಿಲ್ಲ. ಒಂದಂತೂ ನಿಜ ಸಿದ್ದರಾಮಯ್ಯನವರು ಆಡಿಸಿದ ಹಾಗೆ ಆಡುವ ಗೊಂಬೆ ಎಂದು ಹೇಳಿದ್ದಾರೆ.