ಅಪ್ಪು ನಮ್ಮನ್ನಗಲಿ ಮೂರು ವರ್ಷವಾಗಿದೆ. ಅಪ್ಪು ಇಲ್ಲವೆಂದು ನನಗೆ ಯಾವತ್ತೂ ಅನಿಸಲಿಲ್ಲ ಯಾಕೆಂದರೆ ಅಪ್ಪು ನಮ್ಮಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ಅಪ್ಪುನ ಮರೆಯೋಕೆ ಸಾದ್ಯವೇಯಿಲ್ಲ. ನಾನು ಎಲ್ಲೆ ಹೋದರೂ ಅಪ್ಪು ನೆನಪಾಗ್ತನೇ ಇರ್ತಾನೆ.ಇಷ್ಟ್ ಬೇಗ ಅವರನ್ನು ಮರೆಯಲು ಆಗಲ್ಲ.ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ.ನಾವು ಇಲ್ಲಿಗೆ ಬಂದರೆ ಪಾಸಿಟಿವ್ ವೈಬ್ಸ್ ಇದೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಪ್ಪುನ ಕಳೆದುಕೊಂಡಿರುವ ನೋವು ನಾವು ಸಾಯುವವರೆಗೂ ಇದ್ದೇ ಇರುತ್ತದೆ. ಪ್ರತಿದಿನ,ಪ್ರತಿಕ್ಷಣ, ಪ್ರತಿ ಕಾರ್ಯಕ್ರಮದಲ್ಲೂ ನೆನಪು ಮಾಡಿಕೊಳ್ಳುತ್ತೇನೆ.ನಮ್ಮ ಚಿತ್ರರಂಗಕ್ಕೆ ಬರುವ ಯುವ ಕಲಾವಿದರಲ್ಲಿ, ಹೊಸ ಕಲಾವಿದರಲ್ಲಿ ಅಪ್ಪುನ ನೋಡ್ತೀನಿ.ಅಪ್ಪು ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.