ನವದೆಹಲಿ: ಸಂಸತ್‌ ಭವನದಲ್ಲಿ ಮತ್ತೊಮ್ಮೆ ಭದ್ರತಾ ಉಲ್ಲಂಘನೆಯಾಗಿರುವುದು ತಿಳಿದುಬಂದಿದೆ.

ದೆಹಲಿಯ ಸಂಸತ್‌ ಭವನಕ್ಕೆ ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಮರವನ್ನು ಹತ್ತಿ ಸಂಸತ್‌ಭವನದ ಆವರಣಕ್ಕೆ ಬಂದಿದ್ದಾನೆ.ಈ ಘಟನೆಯು ಸುಮಾರು 6.30ಕ್ಕೆ ನಡೆದಿದೆ. ರೈಲ್‌ ಭವನದ ಮೇಲಿಂದ ಹಾರಿ ಸಂಸತ್ತಿನ ಗೇಟನ್ನು ತಲುಪಿದ್ದಾನೆ ಎನ್ನಲಾಗಿದೆ.

ಅಕ್ರಮವಾಗಿ ಒಳನುಗ್ಗಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯವರು ಅರೆಸ್ಟ್‌ ಮಾಡಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.ಈ ಹಿಂದೆಯೂ 2023ರಲ್ಲಿ ಲೋಕಸಭೆಯ ಕಲಾಪ ನಡೆಯುವ ಸಂದರ್ಭದಲ್ಲಿ ಕೂಡಾ ಸಂಸತ್ತಿನ ಒಳಗೆ ನುಗ್ಗಿದ್ದರು.

Leave a Reply

Your email address will not be published. Required fields are marked *