ರಾಜ್ಯದ ಬಿಜೆಪಿ ಸರ್ಕಾರ ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಕೊಡಬೇಕಾದ ಹಣದಲ್ಲಿ ಕೇವಲ ಒಂದು ಪರ್ಸೆಂಟ್ ಹಣವನ್ನೂ ನೀಡಲಾಗಿಲ್ಲ. ಅತ್ಯಧಿಕವಾಗಿ ತೆರಿಗೆ ಕಟ್ಟುವ ಜಿಲ್ಲೆಗಳಲ್ಲಿ ಒಂದಾಗಿರುವ ಕೊಡಗಿಗೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲೀಪೇಟೆ ಆರೋಪಿಸಿದ್ದಾರೆ.
₹3,09,182 ಕೋಟಿ ಗಾತ್ರದ ಬಜೆಟ್ ನಲ್ಲಿ ಕೊಡಗಿಗೆ ಅನ್ಯಾಯ! ಕೊಡಗು ಜಿಲ್ಲೆಯು ರಾಜ್ಯ ಸರ್ಕಾರಕ್ಕೆ ತೆರಿಗೆ ನೀಡುವವರ ಪಟ್ಟಿಯಲ್ಲಿ ಅಗ್ರಸ್ತಾನಿಗಳಲ್ಲಿ ಒಂದಾಗಿದೆ. ಕೊಡಗಿಗೆ ನೀಡಿದ್ದು ₹100 ಕೋಟಿ(0.3%) ಅದು ಕೇವಲ ರಸ್ತೆ ಅಭಿವೃದ್ಧಿಗೆ. ಇದು ನಮ್ಮ ಜಿಲ್ಲೆಯ ಬಿಜೆಪಿ ಶಾಸಕರ ಪ್ರಕಾರ ದೊಡ್ಡ ಸಾಧನೆ! ರಸ್ತೆ ಮೂಲಭೂತ ಹಕ್ಕು ಅದನ್ನು ಮಾಡೋಕೆ ಶಾಸಕರೇ ಬೇಕಿಲ್ಲ ಶಾಸಕರು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ತರುತ್ತಾರೆ. ಕನಿಷ್ಠ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ್ರೀಡಾ ವಿ.ವಿ, ಜಮ್ಮಾ ಬಾಣೆಯ ಗೊಂದಲ ನಿವಾರಣೆಗೆ ಈ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಬುಹಿದಿತ್ತು. @CMofKarnataka ಇದು ಮಲತಾಯಿ ಧೋರಣೆಯೇ? ಅಥವಾ ಕೊಡಗು ಹಾಗೂ ಕೊಡಗಿನವರ ಬಗ್ಗೆ ತತ್ಸಾರವೇ? ತಿಳಿಸಿ.. ಎಂದು ಅಫ್ಸರ್ ಕೊಡ್ಲೀಪೇಟೆ ಟ್ವೀಟ್ ಮಾಡಿದ್ದಾರೆ.