ತಿರುವನಂತಪುರಂ: ತಮ್ಮ ಶಾಲೆಯ ಆವರಣದಲ್ಲಿ ಏನೋ ವಸ್ತು ಬಿದ್ದಿದೆ ಎಂದು ಬಾಲಕನೊಬ್ಬ ಆ ವಸ್ತುವನ್ನು ಎಸೆಯುತ್ತಿದ್ದಂತೆ ಅದು ಸ್ಫೋಟಗೊಂಡಿದ್ದ, ಆ ಘಟನೆಯ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯು ಕೇರಳದ ಪಾಲಕ್ಕಾಡ್‌ ಜಿಲ್ಲೆಯ ವಡಕ್ಕಂತರಾದಲ್ಲಿ ನಡೆದಿದೆ. ಶಾಲೆಯ ಆವರಣದಲ್ಲಿ ಸ್ಫೋಟಕಗಳು ಕಂಡಿದ್ದು, ಇವು ಅಪಾಯಕಾರಿ ವಸ್ತುಗಳು ಎಂದು ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ.

ಆ ವಸ್ತು ಸ್ಫೋಟಗೋಳ್ಳುತ್ತದೆ ಎಂದು ತಿಳಿಯದೆ ಎಸೆದ ಪರಿಣಾಮ ನಾರಾಯಣ್(10)‌ ಮತ್ತು ಓರ್ವ ಮಹಿಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಕಾರಣ ಯಾರು ಎಂಬುದರ ಕುರಿತು ಪೊಲೀಸರು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *