ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ  A1ಆರೋಪಿಯಾಗಿರುವ ಪವಿತ್ರಾಗೌಡ ನೀಡಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು  ನಡೆಸಿ ಇದರ ಕುರಿತ ತೀರ್ಪನ್ನು ಕಾಯ್ದಿರಿಸಲಾಗಿದೆ ಎನ್ನಲಾಗಿದೆ.

ನಗರದ ಸಿವಿಲ್‌ ಕೋರ್ಟ್‌ ಮತ್ತು ನೇಷನ್ಸ್‌ ಕೋರ್ಟ್‌ ಆರೋಪಿಗಳಾಗಿರುವ 4 ಜನರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದು ಆರೋಪಿ ಪವಿತ್ರಾಗೌಡ, ಅನುಕುಮಾರ್‌ ಜಾಮೀನು ಕುರಿತ ಅರ್ಜಿಯ ತೀರ್ಪನ್ನು ಆಗಸ್ಟ್‌ 31ಕ್ಕೆ ಕೋರ್ಟ್‌ ಕಾಯ್ದಿರಿಸಿದ್ದು, ನಂತರ ಆರೋಪಿ ವಿನಯ್‌ ಮತ್ತು ಕೇಶವಮೂರ್ತಿ ಕುರಿತ ಆದೇಶವನ್ನ ಸೆ.2ಕ್ಕೆ ಕಾಯ್ದಿರಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *