ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಮತ್ತು ಹತ್ಯೆ ಪ್ರಕರಣ ಚಾರ್ಜ್‌ಶೀಟನ್ನು ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದ್ದು, ಆ ಚಾರ್ಜ್‌ಶೀಟ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿರುವುದು ಖಚಿತವಾಗಿದ್ದು, ಅವರೇ ಪ್ರಮುಖರು ಎಂದು ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತನಿಖಾಧಿಕಾರಿಯಾಗಿರುವ ಎಸಿಪಿ ಚಂದನ್ ಕುಮಾರ್ ಸಮ್ಮುಖದಲ್ಲಿ ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟಿಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಈ ಚಾರ್ಜ್‌ಶೀಟಲ್ಲಿ ದರ್ಶನ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿರುವುದು, ಹಲ್ಲೆ ಮಾಡಿರುವುದು, ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್ ಇರುವುದು ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಅದರ ಜೊತೆಗೆ ಕೊಲೆ ಮಾಡುವ ಮುನ್ನ ಸ್ಟೋನಿ ಬ್ರೂಕ್ಸ್ ಪಬ್‌ನಲ್ಲಿ ಎಲ್ಲರೂ ಸೇರಿ ಸಭೆ ನಡೆಸುವ ರೀತಿಯಲ್ಲಿ ಪಾರ್ಟಿ ಮಾಡಲಾಗಿದೆ ಎಂದು ಉಲ್ಲೇಖವಾಗಿದೆ.
ಕೊಲೆ ಪ್ರಕರಣ ದಾಖಲಾದ 90 ದಿನಗಳ ಮುನ್ನವೇ ಚಾರ್ಜ್‌ಶೀಟನ್ನು ಸಲ್ಲಿಸಲಾಗಿದ್ದು 200ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆಹಾಕಿರುವುದು ಕಂಡುಬಂದಿದೆ.