ಚಿಕ್ಕೋಡಿ: ನನ್ನ ತಂಟೆಗೆ ಬಂದ್ರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಮೆರವಣಿಗೆ ಮಾಡುತ್ತೇನೆ ಎಂದು ಮಾಜಿ ಶಾಸಕ ಶ್ರೀಮಂತ ಪಾಟೀಲ್‌ ವಿರುದ್ದ ಹಾಲಿ ಕಾಂಗ್ರೆಸ್‌ ಶಾಸಕ ರಾಜು ಕಾಗೆ ವಾಗ್ದಾಳಿಯನ್ನ  ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ಅಭಿವೃದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜು ಕಾಗೆ, ನನ್ನ ಬಗ್ಗೆ ಮಾತನಾಡಲು ನಿನಗೆ ರೈಡ್ಸ್‌(ಯೋಗ್ಯತೆ) ಇಲ್ಲ, ಅಪ್ಪಿತಪ್ಪಿ ನನ್ನ ಬಗ್ಗೆ ಮಾತನಾಡಿದರೆ ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನೀನೇನು ಸತ್ಯಹರಿಶ್ಚಂದ್ರನ ತರ ಮಾತಾಡ್ತೀಯಾ ನಿಮ್ಮ ಕಾರ್ಖಾನೆಯ ಕಾರ್ಮಿಕರ ಹಣದಲ್ಲಿ ಬರ್ತಡೇಯನ್ನು ಆಚರಿಸಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.ಈ ಶಾಸಕರ ಹೇಳಿಕೆಗಳು ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

Leave a Reply

Your email address will not be published. Required fields are marked *