ಪಾಟ್ನಾ: ಪಾಟ್ನಾ-ಕೋಟಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ (RPF)ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನಂತ್‌ಪಾಂಡೆ ಎಂಬ ಪ್ರಯಾಣಿಕ ತಮ್ಮ ಬೋಗಿಯಲ್ಲಿದ್ದ AC ಸಮಸ್ಯೆಯನ್ನು ಸಿಬ್ಬಂದಿಗಳ ಗಮನಕ್ಕೆತಂದಿದ್ದರೂ, ಏನು ಪ್ರಯೋಜನವಾಗದಿದ್ದಾಗ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ.ಇದರಿಂದ ಕೋಪಗೊಂಡ RPF ಅಧಿಕಾರಿಗಳು ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
AC ಸರಿಯಾಗಿ ಕೆಲಸ ಮಾಡದಿದ್ದ ಕಾರಣ ಎಮರ್ಜೆನ್ಸಿ ಚೈನನ್ನು ಎಳೆದಿದ್ದು, ಇದೇ ರೀತಿ ಎರಡಕ್ಕಿಂತ ಹೆಚ್ಚು ಬಾರಿ ಮಾಡಿರುವ ಕಾರಣ ಬೇರೆ ಪ್ರಯಾಣಿಕರಿಗೆ ತೊಂದರೆಗಳುಂಟಾಗಿರುವ ಕಾರಣದಿಂದ ರೈಲ್ವೆ ರಕ್ಷಣಾ ಅಧಿಕಾರಿಗಳು ಹಲ್ಲೆ ನಡೆಸಿ ರೈಲಿನಿಂದ ಹೊರದಬ್ಬಿದ್ದಾರೆ.ಈ ಘಟನೆಯ ವಿಡಿಯೋ ಅಕ್ಟೋಬರ್ 28ರಂದು ಸೋಚಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.