ನವದೆಹಲಿ: ಹರಿಯಾಣ ವಿಧಾನಸಭಾ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬರು ಆಟಗಾರರನ್ನು ಕಣಕ್ಕಿಳಿಸಬಹುದು ಎನ್ನುವ ವದಂತಿಗಳ ನಡುವೆ ರಾಹುಲ್ ಗಾಂಧಿಯವರು ತಾರಾ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇವರಿಬ್ಬರ ಭೇಟಿಯಿಂದಾಗಿ ಎಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಈ ಎಲ್ಲಾ ಗೊಂದಲಗಳ ನಡುವೆ ಪುನಿಯಾ ಮತ್ತು ಫೋಗಟ್ ಚುನಾವಣಾ ಕಣಕ್ಕೆ ಇಳಿಯಬಹುದೇ ಎನ್ನುವ ಪ್ರಶ್ನೆಗೆ ಗುರುವಾರದ ವೇಳೆಗೆ ಸ್ಪಷ್ಟತೆ ಸಿಗಲಿದೆ ಎಂಬ ಮಾಹಿತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಹರಿಯಾಣ ಉಸ್ತುವಾರಿ ದೀಪಕ್ ಬಬಾರಿಯಾರವರು ನೆನ್ನೆ (ಮಂಗಳವಾರ) ತಿಳಿಸಿದ್ದಾರೆ.
ಇದಲ್ಲದೆ ರಾಹುಲ್ ಗಾಂಧಿ, ಇಬ್ಬರು ಕ್ರಿಡಾಪಟುಗಳಿರುವ ಪೋಟೊವನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದಾಗಿದೆ.