ಬಿಗ್ಬಾಸ್ ಮನೆಯಲ್ಲಿ ಭಾವಾನಾತ್ಮಕ ಕ್ಷಣಗಳು, ಖುಷಿಯ ಕ್ಷಣಗಳು,ಹೀಗೆ ಹಲವು ತಿರುವುಗಳು ನಡೆಯುತ್ತಿರುತ್ತವೆ.ಈ ವಾರ ಬಿಗ್ವಾಸ್ ಮನೆ ರಘುರವರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಸರ್ಪ್ರೈಸ್ ಗಿಫ್ಟ್ನ್ನು ನೋಡಿ ಬಿಗ್ಬಾಸ್ ರಘು ಭಾವುಕರಾಗಿದ್ದಾರೆ.

ಈ ವಾರ ಬಿಗ್ಬಾಸ್ ಮನೆ ಫ್ಯಾಮಿಲಿ ವೀಕ್ ಆಗಿದೆ. ಎಲ್ಲಾ ಸ್ಪರ್ಧಿಗಳ ಮನೆಯವರ ಜೊತೆ ತಮ್ಮ ಮಧುರವಾದ ಕ್ಷಣಗಳನ್ನು ಕಳೆಯುತ್ತಿದ್ದು, ಬಿಗ್ಬಾಸ್ ಮನೆಯು ಪ್ರೀತಿ, ವಾತ್ಸಲ್ಯ,ಭಾವುಕತೆಯ ಮಿಕ್ಚರ್ ಆಗಿದೆ.

ರಘು ಪತ್ನಿಯ ಬರ್ತಡೆ ದಿನ ಬಿಗ್ಬಾಸ್ ಮನೆಗೆ ರಘರವರ ಪತ್ನಿಯನ್ನು ಕರೆಸಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.ʼನನ್ ಬರ್ತಡೇ ಇವತ್ತುʼ ಎಂದು ಪತ್ನಿ ಗ್ರೀಷ್ಮ ರಘುಗೆ ಹೇಳ್ತಾರೆ.ಅದಕ್ಕೆ ಗೊತ್ತು ಎಂದು ರಘು ʼಮತ್ತೆ ವಿಶ್ ಮಾಡು…ಅಳ್ತ ಇದ್ದೀಯಲ್ಲʼ ಎಂದು ಗ್ರೀಷ್ಮಹೇಳುತ್ತಾರೆ.ಪತ್ನಿಯನ್ನು ತಬ್ಬಿಕೊಂಡು ಬರ್ತಡೆ ವಿಶ್ ಮಾಡ್ತಾರೆ ನಂತರ ಮನೆಯವರೆಲ್ಲರ ಜೊತೆಯಲ್ಲೂ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಬರ್ತಡೆಯ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡ ರಘು ಇವತ್ತು ನನ್ನ ಲಕ್ಕಿ ಡೇ ನನ್ನ ಜೀವನದಲ್ಲಿ ಇಂತಹ ಹುಟ್ಟುಹಬ್ಬದ ಆಚರಣೆಯನ್ನು ಮಾಡುತತಿರಲಿಲ್ಲ. ನಾನು ಸಾಯುವವರೆಗೂ ಈ ಸುಂದರ ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತೇನೆ ಎಂದು ಭಾವುಕರಾಗಿದ್ದಾರೆ.
