ಕಲ್ಟ್‌ ಸಿನಿಮಾದ ಇವೆಂಟಿನಲ್ಲಿ ಬಾಡಿ ಶೇಮಿಂಗ್‌ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಚಿತಾ ರಾಮ್‌ , ನಮ್ಮ ದೇಹ ನಮ್ಮ ಇಷ್ಟ, ನಾವು ಹೇಗಾದ್ರೂ ಇರುತ್ತೇವೆ ನಿಮಗೇನು ಸಮಸ್ಯೆ ಎಂದು ಖಾರವಾಗಿಯೇ ಉತ್ತರ ನೀಡಿದ್ದಾರೆ.ಇದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ, ಮತ್ತು ಎಲ್ಲಾ ಹೆಣ್ಮಕ್ಕಳಿಗೂ ಸ್ಪೂರ್ತಿದಾಯಕವಾದ ಹೇಳಿಕೆಯನ್ನು ನೀಡಿದ್ದಾರೆ.

ಕೆಲವು ಸಮಯದ ಹಿಂದೆ ರಚಿತಾ ರಾಮ್ ಅವರು ತುಸು ದಪ್ಪಗಾಗಿದ್ದಾರೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರನ್ನು ಟೀಕಿಸಿದ್ದರು. ಫೋಟೋ ಮತ್ತು ವಿಡಿಯೋಗಳ ಕೆಳಗೆ ಅವರ ದೇಹದ ತೂಕದ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ದೇಹದ ಬಗ್ಗೆ ನನಗಿಲ್ಲದ ಕಾಳಜಿ ಬೇರೆಯವರಿಗೇಕೆ? ಎಂಬರ್ಥದಲ್ಲಿ ಮಾತನಾಡಿದ್ದರು.

ನಾನು ಹೇಗಿದ್ದೇನೋ ಹಾಗೆಯೇ ನನಗೆ ಇಷ್ಟ. ದಪ್ಪ ಇರಲಿ ಅಥವಾ ಸಣ್ಣ ಇರಲಿ, ಅದು ನನ್ನ ಬಾಡಿ, ನನ್ನ ಇಷ್ಟ. ಅದರ ಬಗ್ಗೆ ಕಾಮೆಂಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದರು.

ನಟಿಯರು ಸದಾ ಸಣ್ಣಗೇ ಇರಬೇಕು ಎಂಬ ನಿಯಮವೇನೂ ಇಲ್ಲ. ಸಿನಿಮಾ ಪಾತ್ರಗಳಿಗಾಗಿ ಅಥವಾ ವೈಯಕ್ತಿಕ ಕಾರಣಗಳಿಗಾಗಿ ತೂಕದಲ್ಲಿ ಏರುಪೇರಾಗುವುದು ಸಹಜ. ಟೀಕೆ ಮಾಡುವವರಿಗಿಂತ ತಮ್ಮ ಮಾನಸಿಕ ಶಾಂತಿ ಮತ್ತು ನೆಮ್ಮದಿ ಮುಖ್ಯ ಎಂಬ ನಿಲುವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದರು.

ಅವರು ಕೆಲವು ಸಿನಿಮಾಗಳ ಪಾತ್ರಕ್ಕಾಗಿ ಉದ್ದೇಶಪೂರ್ವಕವಾಗಿಯೇ ತೂಕ ಹೆಚ್ಚಿಸಿಕೊಂಡಿರುತ್ತಾರೆ. ತೂಕ ಹೆಚ್ಚಾಗಿರುವುದಕ್ಕೆ ತಮಗೆ ಯಾವುದೇ ಭಯವಿಲ್ಲ ಮತ್ತು ಅದನ್ನು ಕೇಳಲು ಯಾರಿಗೂ ರೈಟ್ಸ್‌ ಇಲ್ಲ.

ಎಲ್ಲಾ ಹೆಣ್ಮಕ್ಕಳ ದೇಹವೂ ಒಂದೇ ತರಹವಿರುವುದಿಲ್ಲ. ಒಬ್ರು ಸಣ್ಣ ಇದ್ರೆ, ಮತ್ತೊಬ್ಬರು ದಪ್ಪ, ಕೆಲವರು ಕಡಿಮೆ ನಿದ್ದೆ ಮಾಡದ್ರೆ ದಪ್ಪ ಆಗ್ತಾರೆ, ಟೆಂಕ್ಷನ್‌ ತೆಗೆದುಕೊಂಡರೆ ದಪ್ಪ ಆಗ್ತಾರೆ. ಹಾಗಂತ ನಮ್ಮ ಸಮಸ್ಯೆಯನ್ನು ಎಲ್ಲರಿಗೂ ಡಂಗೂರ ಸಾರುವುದಕ್ಕೆ ಆಗುತ್ತದಾ? ಕೆಟ್ಟ ಕಮೆಂಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಂಡ್ರೆ ಆಗುತ್ತಾ? ಆ ಕಮೆಂಟ್‌ಗಳಿಗೆ ತಲೆನೇ ಕೆಡಿಸಿಕೊಳ್ಳಬಾರದು ಎಂದು ರಚಿತಾ ರಾಮ್‌ ಹೇಳಿದ್ದಾರೆ.

ಅಶ್ಲೀಲ ಮತ್ತು ಕೆಟ್ಟ ಕಮೆಂಟ್‌ ನಿಂದಾಗಿ ಕೆಲ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮ್ಮ ತಂದೆತಾಯಿಗಳು ನಮ್ಮನ್ನು ಚಿಕ್ಕಂದಿನಿಂದ ಎಷ್ಟುಕಷ್ಟಪಟ್ಟು ಸಾಕಿರುತ್ತಾರೆ. ಗೊತ್ತಿಲ್ಲದವರ, ಕೆಲಸಕ್ಕೆ ಬಾರದವರ ಕಮೆಂಟುಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಮುಟ್ಟಾಳತನ ಎಂದು ಕೋಪದಿಂದ ಹೇಳಿದ್ದಾರೆ.

ಕಲ್ಟ್‌ ಸಿನಿಮಾದ ಇವೆಂಟ್‌ ಕಾರ್ಯಕ್ರಮದಲ್ಲಿ ರಚಿತಾರಾಮ್‌ ಮಾತನಾಡಿದ್ದು, ಇದೇ ತಿಂಗಳು ಜ.23ರಂದು ಸಿನಿಮಾ ರಿಲೀಸ್‌ ಆಗಲಿದ್ದು, ಚಿತ್ರದಲ್ಲಿ ಝೈದ್‌ ಖಾನ್‌ ನಾಯಕರಾಗಿದ್ದು, ರಚಿತಾರಾಮ್‌ ಮತ್ತು ಮಲೈಕಾ ವಸುಪಾಲ್‌ ನಾಯಕಿಯರಾಗಿದ್ದಾರೆ.ಈ ಸಿನಿಮಾವನ್ನು ಅನಿಲ್‌ಕುಮಾರ್‌ ಡೈರೆಕ್ಷನ್‌ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *