ಗುಜರಾತ್: ʻಗೋವಿನ ಸಗಣಿಯಿಂದ ತಯಾರಿಸಿದ ಮನೆಗಳು ವಿಷಾತೀತ ಕಿರಣದ ಪ್ರಭಾವಕ್ಕೆ ಒಳಗಾಗುವುದಿಲ್ಲವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆʼ ಎಂದು ಗುಜರಾತ್ನ ತಾಪಿ ಜಿಲ್ಲೆಯಲ್ಲಿರುವ ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿರುವುದು ಕೇಳಿಬಂದಿದೆ.
ಗೋ ಸಾಗಣೆ ನಿಯಮವನ್ನು ಉಲ್ಲಂಘಿಸಿ ಗುಜರಾತ್ನಿಂದ ಮಹಾರಾಷ್ಟ್ರಕ್ಕೆ ಗೋವನ್ನು ಸಾಗಾಟ ಮಾಡಿರುವ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ನ್ಯಾಯಮೂರ್ತಿ ಸಮೀರ್ ವ್ಯಾಸ್, ಕೋರ್ಟ್ ತೀರ್ಪಿನ ಪ್ರಕಟಣೆಯ ವೇಳೆಯಲ್ಲಿ ಗೋವಿನ ಕುರಿತು ಉಲ್ಲೇಖಿಸುತ್ತಾ, ʼಡಾಕ್ಟರ್ಗಳಿಂದಲೂ ಗುಣಪಡಿಸಲಾಗದ ಹಲವಾರು ರೋಗಗಳಿಗೆ ಗೋಮೂತ್ರ ಶಮನಕಾರಿಯಾಗಿದೆʼ ಎಂದಿದ್ದಲ್ಲದೆ, ʼ2022ರ ನವೆಂಬರ್ನಲ್ಲಿ ಬಂದಿರುವ ತೀರ್ಪಿನ ಪ್ರತಿಗಳಲ್ಲಿ ಈ ರೀತಿಯ ಉಲ್ಲೇಖಗಳಿವೆ; ಯಾವಾಗ ಗೋವಿನ ರಕ್ತ ಭೂಮಿಯ ಮೇಲೆ ಬೀಳುವುದಿಲ್ಲವೋ ಆ ಭೂಮಿಯ ಮೇಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಆದ್ದರಿಂದ ಗೋರಕ್ಷಣೆ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಗೋಹತ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ʼಗೋವು ಕೇವಲ ಪ್ರಾಣಿಯಲ್ಲ ಅದು ನಮ್ಮ ತಾಯಿʼ ಎಂದು ಅಭಿಪ್ರಾಯಪಟ್ಟರು.
ತೀರ್ಪಿನ ಪ್ರತಿ